ಸೊರಬ: ತಾಲೂಕು ಹೆಚ್ಚೆ ಗ್ರಾಮದ ಪ್ರಾಚೀನ ನೀಲಕಂಠೇಶ್ವರ ದೇಗುಲದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಮುಷ್ಠಿಕಾಣಿಕೆ ಸಂಗ್ರಹದ ಮೂಲಕ ದೇಗುಲ ನಿರ್ಮಾಣದ ಸಂಕಲ್ಪ ಕಾರ್ಯಕ್ರಮ ಜರುಗಿತು.
ಕ್ರಿ.ಶ.10ನೇ ಶತಮಾನದಲ್ಲಿ ನಿರ್ಮಾಣವಾದಂತಹ ಈ ದೇಗುಲ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ತುರ್ತು ಜೀರ್ಣೋದ್ಧಾರವಾಗಬೇಕಿದೆ. ಪ್ರಸ್ತುತ ಪೂರ್ವಕಾಲದ ಶಿಲಾಮಯ ಗರ್ಭಗುಡಿಯಿದ್ದು, ಗರ್ಭಗುಡಿ ಹೊರತು ಪಡಿಸಿ ನಂತರ ಕಾಲದಲ್ಲಿ ನಿರ್ಮಿಸಲ್ಪಟ್ಟ ಮುಂಭಾಗವನ್ನು ಪುನ:ನಿರ್ಮಿಸಲು ಗ್ರಾಮಸ್ಥರು ಯೋಜಿಸಿದ್ದು, ದೇಗುಲ ಜೀರ್ಣೋದ್ಧಾರ ಸಮಿತಿ, ಹೆಚ್ಚೆ, ಹುಲ್ತಿಕೊಪ್ಪ, ಒಕ್ಕಲಕೊಪ್ಪ, ಹೊಸಕೊಪ್ಪ, ಕಾರೆಹೊಂಡ ಗ್ರಾಮಸ್ಥರು ಪಾಲ್ಗೊಂಡು ಮುಷ್ಠಿ ಕಾಣಿಕೆ ಸಮರ್ಪಿಸಿದರು.
ಕೃಷ್ಣಶಾಸ್ತ್ರಿ ನೇತೃತ್ವದಲ್ಲಿ ಇಲ್ಲಿನ ಪ್ರಾಚೀನ ಲಿಂಗಕ್ಕೆ ವಿಶೇಷ ಪೂಜೆ, ಪುಷ್ಪಾಲಂಕಾರ, ಅಭಿಷೇಕಾದಿಗಳು ನಡೆದವು.
ಗ್ರಾಮದ ಆರಾಧ್ಯ ದೈವ ಕಾಳಿಕಾಂಬ, ರಾಮಂತ, ಆಂಜನೇಯ ಮುಂತಾದ ಗುಡಿಗಳಲ್ಲೂ ವಿಶೇಷ ಪೂಜೆ ನಡೆದು ಅಲ್ಲಿಂದ ದೇಗುಲ ಜೀರ್ಣೋದ್ಧಾರಕ್ಕೆ ಮುಷ್ಠಿಕಾಣಿಕೆಯನ್ನು ಸಂಗ್ರಹಿಸಿ ತರಲಾಯಿತು.
(ವರದಿ: ಮಧುರಾಮ್, ಸೊರಬ)
Discussion about this post