ಕಲ್ಪ ಮೀಡಿಯಾ ಹೌಸ್ | ಸೊರಬ |
ವೃತ್ತಿಯಲ್ಲಿಯೆ ಶ್ರೇಷ್ಠ ವೃತ್ತಿಯಾಗಿರುವ ಶಿಕ್ಷಕರ ಸೃಜನಾತ್ಮಕತೆಗೆ ಅವಕಾಶವಿದ್ದರೆ ಆತ ಇನ್ನಷ್ಟು ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಮುಖ್ಯ ಶಿಕ್ಷಕಿ ಸಾವಿತ್ರಮ್ಮ ಹೇಳಿದರು.
ತಾಲ್ಲೂಕು ಕಾರೆಹೊಂಡ ಗ್ರಾಮಸ್ಥರು ಹಮ್ಮಿಕೊಂಡ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಆತ್ಮೀಯ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಇತ್ತೀಚಿನ ಆಡಳಿತಗಳ ಹಲವಾರು ಯೋಜನೆಯ ನಿರ್ವಹಣೆಯಲ್ಲಿ ಮುಖ್ಯ ಶಿಕ್ಷಕರು ಕೇವಲ ಲೆಕ್ಕಪತ್ರದಲ್ಲಷ್ಟೆ ಮುಳುಗಿರುವ ಕಾರಣ ಮಕ್ಕಳಿಗೆ ಜ್ಞಾನ ನೀಡುವಲ್ಲಿ ವಿಫಲರಾಗಿದ್ದಾರೆ. ಶಾಲೆಯ ಭೌತಿಕ ಯೋಜನೆಯ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆಯಾದರೆ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕ ಮೌಲ್ಯವನ್ನು ಕೊಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
Also read: ದೆಹಲಿಯ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ | ಭೀತಿ ಸೃಷಿಸಿದ ಸ್ಫೋಟಕ ಇ-ಮೇಲ್

ಹೊಸಬಾಳೆ ಕ್ಲಸ್ಟರ್ ಸಿಆರ್ಪಿ ಶಿವಕುಮಾರ್ ಮಾತನಾಡಿ, ಗ್ರಾಮಸ್ಥರ ಮತ್ತು ಶಿಕ್ಷಕರ ಸಂಬಂಧ ಅನನ್ಯವಾಗಿದ್ದರೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂಬುದನ್ನು ಗ್ರಾಮ ನಿರೂಪಿಸಿದೆ. ತಾಲ್ಲೂಕಿನ ಮೂಲೆಯಲ್ಲಿರುವ ಇಂತಹ ಶಾಲೆಯಲ್ಲಿ ವೃತ್ತಿ ಸೇವೆ ನಡೆಸಿ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶಿಕ್ಷಕಿ ಸಾವಿತ್ರಮ್ಮ ಅವರ ಸೇವೆಯ ಮೌಲ್ಯವನ್ನು ಇಂದು ಇಂತಹ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಗುರುತಿಸಿದೆ ಎಂದರು.
ತಳಿರು ತೋರಣ, ವರ್ಣರಂಜಿತ ಹಬ್ಬದ ವಾತಾವರಣದ ಬೀಳ್ಕೊಡುಗೆಯ ಸಮಾರಂಭದಲ್ಲಿ ಇಡೀ ಗ್ರಾಮಸ್ಥರು, ಶಾಲಮಕ್ಕಳು, ಹೊಸಬಾಳೆ ಹಾಗೂ ವಿವಿಧ ಕ್ಲಸ್ಟರ್ ನ ಹಲವು ಶಿಕ್ಷಕರು, ಶಿಕ್ಷಕ ಸಂಘದವರು ಪಾಲ್ಗೊಂಡು ಶಿಕ್ಷಕಿ ಕುಟುಂಬದವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಉಡುಗೊರೆಗಳ ಮೂಲಕ ಭಾವನಾತ್ಮಕವಾಗಿ, ಸಾಂಪ್ರದಾಯಿಕವಾಗಿ ಅಭಿನಂದಿಸಿದರು.

ವೇದಿಕೆಯಲ್ಲಿ ಗ್ರಾಮ ಪ್ರಮುಖರಾದ ಭೂತಪ್ಪ, ಬೀರಪ್ಪ,ಬುದ್ಧಿವಂತ ಬೀರಪ್ಪ ಶಾಲಾ ಸಮಿತಿ ಉಪಾಧ್ಯಕ್ಷೆ ಗೌರಮ್ಮ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ, ಶಿಕ್ಷಕ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ರಾಜುಸಂಕಣ್ಣೇರ್, ಶಿಕ್ಷಕರ ಸಂಘದ ನಿರ್ದೇಶಕ ಗುಡ್ಡಪ್ಪ, ಕೇಶವ, ಆರೋಗ್ಯಾಧಿಕಾರಿ ಅಂಜಂ,ಆಶಾ, ರಾಜ್ಯ ಗ್ರಾಮೀಣ ಶಿಕ್ಷಕರ ಸಂಘದ ಹಾಲೇಶ್ ನವುಲೆ, ತೀರ್ಥಹಳ್ಳಿ ಶಿಕ್ಷಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆರೆಯಪ್ಪ, ಶಾಲಾ ಸಹಶಿಕ್ಷಕ ಸುರೇಶ್ ನಾಯ್ಕ್, ಸುಜಾತಾ, ಅಂಗನವಾಡಿ ಕಾರ್ಯಕರ್ತೆ ರೇಣುಕಾ, ಶಾಲಾ ಸಮಿತಿ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post