ಕಲ್ಪ ಮೀಡಿಯಾ ಹೌಸ್ | ಸೊರಬ |
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಅರಳಿಸಲು ಹಾಗೂ ಸುಪ್ತ ಪ್ರತಿಭೆಯ ಅನಾವರಣಕ್ಕೆ ವಿಜ್ಞಾನ ವಸ್ತು ಪ್ರದರ್ಶನ #Science Exhibition ಉತ್ತಮ ವೇದಿಕೆಯಾಗಿದೆ ಎಂದು ಮುಖ್ಯಶಿಕ್ಷಕ ಅಜ್ಮತ್ ಡಿ. ಎ. ಹೇಳಿದರು.
ಪಟ್ಟಣದ ರೆಡಿಯನ್ಸ್ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಮಾಡೆಲ್‌ಗಳನ್ನು ಪ್ರದರ್ಶಿಸಿದ್ದಾರೆ. ವೈಜ್ಞಾನಿಕ ಮನೋಭಾವ ಅನಾವರಣಕ್ಕೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ. ಪ್ರಸುತ ದಿನಗಳಲ್ಲಿ ತಂತ್ರಜ್ಞಾನ ಮತ್ತು ಪರಿಸರ ಕಾಳಜಿ ಅತ್ಯಂತ ಅವಶ್ಯಕವಾಗಿದೆ. ಕ್ರಿಯಾತ್ಮಕ ಮನೋಶಕ್ತಿಗೆ ಉತ್ತೇಜನ ನೀಡಲಾಗುತ್ತಿದೆ.

Also read: ಮನು ಭಾಕರ್, ಗುಕೇಶ್ ಸೇರಿ ನಾಲ್ವರಿಗೆ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ
ವಿಜ್ಞಾನ ವಸ್ತುಪ್ರದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಮಳೆ ನೀರು ಕೊಯ್ಲು, ಕೃಷಿ ಪದ್ಧತಿ,ಹೆದ್ದಾರಿಗಳು,ಅಂತರ್ಜಲ ರಸ್ತೆ ಮಾರ್ಗ, ಸ್ಮಾರ್ಟ್ ಸಿಟಿ, ಪರಿಸರ ಮಾಲಿನ್ಯ ನಿಯಂತ್ರಣ, ಆಹಾರದ ಜೀರ್ಣಕ್ರಿಯೆ ವ್ಯವಸ್ಥೆ, ಸೂರ್ಯ-ಚಂದ್ರ ಗ್ರಹಣ, ಸೋಲಾರ್ ಬಳಕೆ, ಬೆಳಕಿನ ಶಕ್ತಿ ಬಳಕೆ, ಮನುಷ್ಯರ ಜೀವನ ಶೈಲಿ, ಪ್ರಾಕೃತಿಕ ಸಂಪತ್ತು ರಕ್ಷಣೆ, ಬಣ್ಣಗಳ ವರ್ಗೀಕರಣ ಹೀಗೆ ಸುಮಾರು ನೂರಾರು ಬಗೆಯ ಮಾದರಿಗಳನ್ನು ಪ್ರದರ್ಶಿಸಿದರು.
ವಿಶೇಷವಾಗಿ ಜಾಗತಿಕ ತಾಪಮಾನವೃದ್ಧಿ ಹಾಗೂ ಆಹಾರದ ಜೀರ್ಣಕ್ರಿಯೆ ವ್ಯವಸ್ಥೆ ಮಾದರಿ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿಗಳು ತಾವೇ ತಯಾರಿಸಿದ ಮಾದರಿಗಳ ಕುರಿತು ಉತ್ತಮವಾಗಿ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ನೂರ್ ಮಹಮ್ಮದ್, ಕಾರ್ಯದರ್ಶಿ ಶಹಾಬುದ್ದೀನ್,ಶಿಕ್ಷಕರಾದ ರುಕಿಯಾ ಬಾನು, ಶಮೀಮ್ ಬಾನು, ಸಾಧಿಯ, ಮುಸ್ಕನ್, ನಸ್ರೀನ್. ಪೋಷಕರಾದ ಸೈಫುಲ್ಲಾ, ಉಜ್ಮ ಆರಾ, ಅಮಾನುಲ್ಲಾ, ಶಾಂಶಾದ್ ಬೇಗಂ, ಆಸ್ಮ ಪರ್ವೀನ್, ಅರ್ಶಾದ್ ಅಯೂಬ್, ಮನ್ಸೂರ್ ಅಹ್ಮದ್, ಆಸೀಫಾ ಪರ್ವೀನ್, ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post