ಕಲ್ಪ ಮೀಡಿಯಾ ಹೌಸ್ | ಸೊರಬ |
ಗೀತಾ ಶಿವರಾಜಕುಮಾರ್ #Geetha Shivarajkumar ಅವರನ್ನು ಬಂಗಾರಪ್ಪ #Bangarappa ಪುತ್ರಿ, ಡಾ. ರಾಜಕುಮಾರ್ #Dr. Rajkumar ಸೊಸೆ ಹಾಗೂ ಶಿವರಾಜಕುಮಾರ್ #Shivarajkumar ಪತ್ನಿ ಎಂದು ಕ್ಷೇತ್ರದ ಜನ ಅಭಿಮಾನ ನೀಡುತ್ತಾರೆಯೇ ಹೊರತು ಮತ ನೀಡಲ್ಲ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ #Harathalu Halappa ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ #Yadiyurappa ಹಾಗೂ ರಾಘವೇಂದ್ರ #Raghavendra ಅವರಿಂದ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಕಂಡಿದೆ. ಆದರೆ, ಗೀತಾ ಶಿವರಾಜಕುಮಾರ್ ಅವರು ಅವರದ್ದೇ ಪಕ್ಷದ ನಾಲ್ಕು ಅಧ್ಯಕ್ಷರ ಹೆಸರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

Also read: ಕಾಂಗ್ರೆಸ್’ನಿಂದ ರಾತ್ರಿ ಒತ್ತಡ, ಆಮಿಷ | ಪ್ರಜಾಪ್ರಭುತ್ವಕ್ಕೆ ಮಾರಕ | ಇದು ಅಸಹ್ಯ | ಡಾ.ಸಿ.ಎನ್. ಮಂಜುನಾಥ್
ರಾಜಕುಮಾರ್ ಕುಟುಂಬಸ್ಥರ ಸಮ್ಮತಿ ಇಲ್ಲದೇ ಇದ್ದರೂ, ರಾಜಕಾರಣಕ್ಕೆ ಬಂದಿದ್ದಾರೆ. ಜಾತಿ, ಊರು ಹಾಗೂ ನಾಯಕರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಾತಿ ಮೇಲಿನ ಅಭಿಮಾನ ಬೇಡ. ಬದಲಾಗಿ ಕ್ಷೇತ್ರ ಹಾಗೂ ದೇಶದ ಅಭಿವೃದ್ಧಿ ಮತ ನೀಡುವ ನಿಮ್ಮ ಆದ್ಯತೆಯಾಗಲಿ ಎಂದರು.

ಕೇಂದ್ರ ಸಚಿವ ರಾಘಣ್ಣ ಎನ್ನುತ್ತೇವೆ
ಮೂರು ಬಾರಿ ಸಂಸದರಾಗಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವ ರಾಘಣ್ಣ ಅವರು ಈ ಭಾರಿ ಗೆದ್ದ ನಂತರ ಎಂಪಿ ರಾಘಣ್ಣ ಎನ್ನಲ್ಲ. ಬದಲಾಗಿ, ಈ ಬಾರಿ ಗೆದ್ದು ಕೇಂದ್ರ ಸಚಿವರಾಗುತ್ತಾರೆ. ಹೀಗಾಗಿ, ಅವರನ್ನು ಕೇಂದ್ರ ಸಚಿವ ರಾಘಣ್ಣ ಎಂದು ಕರೆಯುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post