Read - 2 minutes

ತಾಲ್ಲೂಕು ಗೊಗ್ಗೆಹಳ್ಳಿ ಪಂಚಮಠದ ಬಿಲ್ವಪತ್ರ ವನದೊಳಗೆ ಮುಟುಗುಪ್ಪೆ ಗ್ರಾಪಂ ವ್ಯಾಪ್ತಿಯ ಕಾನುಬೆಟ್ಟಗಳ ರಕ್ಷಣೆ ಕುರಿತಂತೆ ಸಮಾಲೋಚನೆ ನಡೆಸಿದರು.
ಕಲ್ಪ ಮೀಡಿಯಾ ಹೌಸ್ | ಸೊರಬ |
ವಿದೇಶಿಯರಿಂದ ಪ್ರಶಂಸೆನೆಗೊಳಗಾದ ಅಮೂಲ್ಯ ಕಾನು ಪ್ರದೇಶವನ್ನೊಳಗೊಂಡ ಸೊರಬ ತಾಲ್ಲೂಕಿನಲ್ಲಿ ದೇವರ ಕಾಡುಗಳ ಸಂಖ್ಯೆಯೂ ಗಮನಾರ್ಹವಾಗಿದೆ. ಅಷ್ಟೆ ವನಸಂಪತ್ತಿಗೆ ಪೂರಕವಾಗಿ ಕೆರೆಗಳ ಸಂಖ್ಯೆಯೂ ಅಧಿಕವಾಗಿದ್ದು, ಕೆರೆಗಳು ಈ ಕಾನನ್ನ ಅವಲಂಬಿಸಿವೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತಹೆಗಡೆ ಅಶಿಸರ ಹೇಳಿದರು.

ತಾಲ್ಲೂಕು ಗೊಗ್ಗೆಹಳ್ಳಿ ಪಂಚಮಠದ ಬಿಲ್ವಪತ್ರ ವನದೊಳಗೆ ಮುಟುಗುಪ್ಪೆ ಗ್ರಾಪಂ ವ್ಯಾಪ್ತಿಯ ಕಾನುಬೆಟ್ಟಗಳ ರಕ್ಷಣೆ ಕುರಿತಂತೆ ಸಮಾಲೋಚನೆ ನಡೆಸಿದರು.
ಇಲ್ಲಿನ ಕಾನುಗಳು ವೈವಿಧ್ಯ ಸಸ್ಯಸಂಪತ್ತನ್ನೊಳಗೊಂಡು ವಿವಿಧ ಜೀವಿಗಳಿಗೆ ಆಶ್ರಯ ನೀಡಿದೆ. ಇಷ್ಟೆಲ್ಲ ಸಂಪದ್ಭರಿತ ಕಾನು ಪ್ರದೇಶ ತೀರಾ ಇತ್ತೀಚೆಗೆ ನಾಶಗೊಳ್ಳುತ್ತಿದ್ದು ಆಡಳಿತದ ಜೊತೆಗೆ ಇಲ್ಲಿನ ಜನತೆ ಮುಂದಾಗಿ ಅರಣ್ಯ ನಾಶ ತಡೆಯುವ ಮೂಲಕ ತಮ್ಮ ಕೃಷಿ ಸಂಪತ್ತನ್ನು ವೃದ್ಧಿಗೊಳಿಸಿಕೊಳ್ಳಬೇಕು.

ಗೊಗ್ಗೆಹಳ್ಳಿ ಹೆಸರೆ ಸೂಚಿಸುವಂತೆ ಗೊಗ್ಗಯ್ಯ ಶರಣರ ನೆಲೆ. ಇಂತಹ ಶರಣರ ಪವಿತ್ರಕ್ಷೇತ್ರದ ಇಲ್ಲಿನ ದೇವರ ಕಾಡು ಮಾದರಿಯೆನಿಸಿದೆ. ಈಗಾಗಲೇ ಇಲ್ಲಿಗೆ ಸಮೀಪದ ದ್ಯಾವಗೋಡು ಚೌಡಿಕಾನು, ನ್ಯಾರ್ಸಿ ಬೆಟ್ಟಪ್ರದೇಶದ ಸಂರಕ್ಷಣೆಯೊಂದಿಗೆ ಇನ್ನೂ ಅನೇಕ ಸಾಮೂಹಿಕ ಭೂಮಿಯ ರಕ್ಷಣೆ ಜನಸಹಭಾಗಿತ್ವದ ಮೂಲಕ ಆಗಿದೆ. ಗೊಗ್ಗೆಹಳ್ಳಿ ಕಾನು ಬನಗಳ ವೈವಿಧ್ಯತೆ ಕುರಿತಂತೆ ಸಮಗ್ರ ಅಧ್ಯಯನ ನಡೆಯಬೇಕಿದೆ. ಇಲ್ಲಿನ ಜನರಲ್ಲಿ ಗೊಗ್ಗಯ್ಯ ಶರಣರೂ ಸೇರಿದಂತೆ ಗೋಸೇವಾ ನಿರತರಾಗಿರುವ ಕಾಯಕಯೋಗಿ ಸಂಗಮೇಶ್ವರ ಶಿವಾಚಾರ್ಯರ ಬಗ್ಗೆಯೂ ಗೌರವವಿದೆ. ಇಲ್ಲಿನ ವನ ಸಮೃದ್ಧಿಯನ್ನು ಕಾಯ್ದುಕೊಂಡು ಗ್ರಾಪಂ, ತಾಪಂ ಜೀವವೈವಿಧ್ಯ ಸಮಿತಿ ಗೊಗ್ಗಯ್ಯ ಶರಣರ ದೇವರಕಾಡು ಎಂದು ಮಾನ್ಯತೆ ನೀಡಲಿವೆ, ಕೆರೆಗಳು, ಕಾನುಗಳ ರಕ್ಷಣಾ ಯೋಜನೆ ರೂಪಿಸಲು ಪಂಚಾಯತ್ ಹಾಗೂ ಅರಣ್ಯ ಇಲಾಖೆ ಮುಂದಾಗಬೇಕು ಎಂದು ಸೂಚಿಸಿದರು.

ಮುಟಗುಪ್ಪೆ ಗ್ರಾಪಂ ವ್ಯಾಪ್ತಿಯ 2140 ಎಕರೆ ಕಾನು ಪ್ರದೇಶ, ಸೊಪ್ಪಿನಬೆಟ್ಟ, ಮುಫತ್ತು ಮತ್ತು ಕೆರೆಗಳ ಕುರಿತಂತೆ ಡಿವೈಆರ್‌ಎಫ್‌ಒ ಶರಣಪ್ಪ ಅಂಕಿ ಅಂಶ ನೀಡಿದರು.

ಜೀವವೈವಿಧ್ಯ ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿ ಅರಣ್ಯನಾಶ ತಡೆಗೆ ಜನಸಹಭಾಗಿತ್ವದ ಯೋಜನೆ ರೂಪಗೊಳ್ಳಬೇಕು. ಈಗಾಗಲೇ ತಾಲ್ಲೂಕಿನಲ್ಲಿ ಶೇ.25ರಷ್ಟು ಅಮೂಲ್ಯ ಕಾಡುಗಳು ನಾಶಗೊಂಡಿದ್ದು, ಉಳಿದಿದ್ದನ್ನಾದರೂ ಉಳಿಸಿಕೊಳ್ಳುವ ಕಾರ್ಯವಾಗಬೇಕಿದೆ ಎಂದರು.

ಗೊಗ್ಗೆಹಳ್ಳಿ ಪಂಚಮಠದ ಶಿವಾನಂದ ಶಿವಾಚಾರ್ಯರ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಮುಟಗುಪ್ಪೆ ಎಸ್.ಸುಬ್ಬರಾವ್, ಲಕ್ಷ್ಮೀನಾರಾಯಣ, ಮೂಡುಗೋಡು ಕಂಚಿಶಿವರಾಂ, ಬನದಕೊಪ್ಪದ ರಾಘವೇಂದ್ರ, ರಾಜೇಂದ್ರ ತಲಕಾಲುಕೊಪ್ಪ, ಕೋಡನಕಟ್ಟೆ ಕೆ.ಟಿ.ಭಟ್, ಚೈತನ್ಯ, ಮುಟಗುಪ್ಪೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ಇಲಾಖೆಯವರು, ಗ್ರಾಪಂ ಜೀವವೈವಿಧ್ಯ ಸಮಿತಿ, ಗ್ರಾಮ ಪ್ರಮುಖರಿದ್ದರು.

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post