ಕಲ್ಪ ಮೀಡಿಯಾ ಹೌಸ್ | ಸೊರಬ |
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಕ್ರಿಯಾಶೀಲ ಶಿಕ್ಷಕರು ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಷಣ್ಮುಖಾಚಾರ್ ಎನ್ ಅವರ ತಾಯಿ ಶ್ರೀಮತಿ ಅಹಲ್ಯ ನಾರಾಯಣ ಆಚಾರ್ (92) ಇವರು ದೈವಾಧೀನರಾದರು.
ಮೃತರು ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ. ಹಿರಿಯ ಪುತ್ರ ಕುಟುಂಬ ಸಮೇತ ಉಡುಪಿಯಲ್ಲಿ ನೆಲೆಸಿದ್ದು, ಕಿರಿಯ ಪುತ್ರ ಕುಟುಂಬ ಸಮೇತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಮೃತರ ಅಂತಿಮ ಸಂಸ್ಕಾರ ಇಂದು ಮದ್ಯಾಹ್ನ 2 ಗಂಟೆಗೆ ನೆರವೇರಿತು.
ಮಾತೃವಿಯೋಗದ ಸುದ್ದಿ ತಿಳಿದು ಸಾಹಿತ್ಯ ವಲಯದ ಗಣ್ಯರು, ಬಂಧುಮಿತ್ರರು ಹಾಗೂ ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post