ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಆನವಟ್ಟಿ ಮೆಸ್ಕಾಂ Mescom ಎಇಇ ಜಿ. ರಮೇಶ್ ಇಂದು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ Lokayuktha ಅಧಿಕಾರಿಗಳಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಇವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಕುಪ್ಪಗಡ್ಡೆ, ಬೆಟ್ಟದಕೊಡ್ಲಿ ಗ್ರಾಮದ ಜಿ. ಪ್ರದೀಪ್ ಎನ್ನುವವರು ಕೆಇಬಿ ಇಲಾಖೆಯಲ್ಲಿ ಕ್ಲಾಸ್-1 ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಗ್ರಾಮದ ಮಂಜುನಾಥ್ ಹಾಗೂ ರಾಘವೇಂದ್ರ ಇವರುಗಳ ಹೆಸರಿನಲ್ಲಿ ಶೀಘ್ರ ಸಂಪರ್ಕ ಯೋಜನೆಯಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಇದರೊಂದಿಗೆ ಶಿವಲಿಂಗಪ್ಪ ಎನ್ನುವವರು ಮೂಡಿದೊಡ್ಡಿಕೊಪ್ಪ ಗ್ರಾಮದಲ್ಲಿ ಜಿಎಸ್‌ಎಂ ಯೋಜನೆಯಡಿಯಲ್ಲಿ ಆರು ಹೆಚ್‌ಪಿ ಕೃಷಿ ಪಂಪ್‌ಸೆಟ್‌ಗಳಿಗೆ, ತರವಂದದ ಗಂಗಾಧರ, ಶಿವರುದ್ರಪ್ಪ ಅವರುಗಳು ಐದು ಹೆಚ್‌ಪಿ ಕೃಷಿ ಪಂಪ್‌ಸೆಟ್‌ಗೆ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕಾಮಗಾರಿಗಳ ವರ್ಕ್ ಆರ್ಡರ್ ಸಹ ಆಗಿದ್ದು, ಲೈಮ್ ವರ್ಕ್ ಸಹ ಮುಕ್ತಾಯಗೊಂಡಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ಎಇಇ ಜಿ. ರಮೇಶ್ ಅವರನ್ನು ಏಳು ಟಿಸಿ ಕೊಡಲು ಅರ್ಜಿದಾರರು ವಿನಂತಿಸಿದ್ದಾರೆ. ಆದರೆ, ಇದಕ್ಕಾಗಿ ರಮೇಶ್ 20,000ರೂ.ಗಳ ಲಂಚದ ಬೇಡಿಕೆ ಇಟ್ಟಿದ್ದರು.
ಘಟನೆ ಕುರಿತಂತೆ ಪ್ರದೀಪ್ ಎನ್ನುವವರು ಜಿಲ್ಲಾ ಲೋಕಾಯುಕ್ತ ಕಚೇರಿಗೆ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಅರ್ಜಿದಾರರಿಂದ ಎಇಇ ರಮೇಶ್ ಇಂದು 20,000ರೂ. ಲಂಚ ಸ್ವೀಕರಿಸುವ ವೇಳೆ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ಧಾರೆ. ಎಇಇ ರಮೇಶ್ ಅವರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.
Also read: ರಾಮಮಂದಿರ ಉದ್ಘಾಟನೆಗೆ ಸೋನಿಯಾ, ಖರ್ಗೆಗೆ ಆಹ್ವಾನ | ಪಾಲ್ಗೊಳ್ಳಲ್ಲ ಕಾಂಗ್ರೆಸ್ ನಾಯಕರು?
ಲೋಕಾಯುಕ್ತ ಎಸ್‌ಪಿ ವಾಗ್ದೇವರಾಮ, ಎಎಸ್‌ಪಿ ಉಮೇಶ್ ಈಶ್ವರನಾಯ್ಕ್ ಅವರ ಮಾರ್ಗದರ್ಶನದಲ್ಲಿ ಪಿಐ ಸುರೇಶ್ ಈ ಕಾರ್ಯಾಚರಣೆ ನಡೆಸಿದ್ದಾರೆ.
ಲೋಕಾಯುಕ್ತ ಸಿಬ್ಬಂದಿಗಳಾದ ಸಿಹೆಚ್‌ಸಿ ಮಹಂತೇಶ್, ಸುರೇಂದ್ರ, ಸಿಪಿಸಿ ಚನ್ನೇಶ್, ಪ್ರಶಾಂತ್ ಕುಮಾರ್, ಅರುಣ್ ಕುಮಾರ್, ದೇವರಾಜ, ರಘುನಾಯ್ಕ್, ಪುಟ್ಟಮ್ಮ, ಜಯಂತ್, ಗಂಗಾಧರ್, ಗೋಪಿ, ಪ್ರದೀಪ್ ಕುಮಾರ್ ತಂಡದಲ್ಲಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post