ಕಲ್ಪ ಮೀಡಿಯಾ ಹೌಸ್ | ಸೊರಬ |
ಸಾರ್ವಜನಿಕ ಬದುಕಿನಲ್ಲಿ ಜನರ ಪರವಾಗಿ ಸಾಮಾಜಿಕ ನ್ಯಾಯ ಕೊಡುವಲ್ಲಿ ಶ್ರಮಿಸುವ ಯಾವುದೇ ವ್ಯಕ್ತಿ ರಾಜಕಾರಣದಲ್ಲಿ ಬಹುಕಾಲ ಉಳಿಯಬಲ್ಲರು ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ, ಹಿರಿಯ ರಾಜಕಾರಣಿ ಪದ್ಮನಾಭ ಭಟ್ ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆಯ ಗಿರಿಜಾ ಶಂಕರ ಸಭಾಭವನದಲ್ಲಿ ಸೊರಬ ವಿಧಾನ ಸಭಾ ಮಟ್ಟದ ನಮೋ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ರಾಜ್ಯದ ಜನತೆ ಸದಾ ಸ್ಮರಿಸುತ್ತಾರೆ. ಬಂಗಾರಪ್ಪ ಅವರ ವಿರುದ್ಧವಾಗಿ ರಾಜಕಾರಣ ಮಾಡಿದ್ದರೂ ಸಹ ಅವರು ಎಂದು ನಮ್ಮನ್ನು ದ್ವೇಷಿಸಲಿಲ್ಲ. ಆದರೆ ಶಾಸಕ ಕುಮಾರ್ ಬಂಗಾರಪ್ಪ ತಮಗೆ ರಾಜಕೀಯವಾಗಿ ಮರು ಜನ್ಮ ನೀಡಿದ ಪಕ್ಷವನ್ನು ಮತ್ತು ಕಾರ್ಯಕರ್ತರನ್ನು ಗೌರವದಿಂದ ಕಾಣದೇ ಇರುವುದು ಅತ್ಯಂತ ಬೇಸರದ ಸಂಗತಿ ಎಂದರು.
ನಮೋ ವೇದಿಕೆ ಅಧ್ಯಕ್ಷ ಪಾಣಿ ರಾಜಪ್ಪ ಮಾತನಾಡಿ, ಶಾಸಕರು ಕಳೆದ ನಾಲ್ಕು ವರ್ಷಗಳ ಕಾಲ ಪಕ್ಷದ ಹಿರಿಯರಿಗೂ ಸಹ ಗೌರವ ನೀಡದಿರುವನ್ನು ಪಕ್ಷದ ಜಿಲ್ಲಾ ಸಮಿತಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೂಲ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಕಡೆಗಣಿಸಿ ಆಡಳಿತ ನಡೆಸುತ್ತಿರುವ ಕುಮಾರ್ ಬಂಗಾರಪ್ಪ ಅವರ ದರ್ಪವನ್ನು ಕೊನೆಗಾಣಿಸಲು ಹಾಗೂ ಅನಿವಾರ್ಯವಾಗಿ ಕಾರ್ಯಕರ್ತರ ರಕ್ಷಣೆ ತಾಲೂಕಿನ ಅಭಿವೃದ್ಧಿಗೆ ನಮೋ ವೇದಿಕೆ ಪ್ರಾರಂಭಿಸಲಾಗಿದೆ ಎಂದರು.
ಪಟ್ಟಣದ ರಂಗಮಂದಿರ ಮುಂಭಾಗದಿಂದ ಹೊಸಪೇಟೆ ಬಡಾವಣೆಯೂ ಕಾರ್ಯಕ್ರಮದ ವೇದಿಕೆ ವರೆಗೆ ನಮೋ ವೇದಿಕೆ ವತಿಯಿಂದ ಸಾವಿರಾರು ಕಾರ್ಯಕರ್ತರು ತಮ್ಮ ಬೈಕ್, ಕಾರುಗಳಿಗೆ ನಮೋ ಬಾವುಟ, ಶಾಲು ಹಾಕಿಕೊಂಡು ಬೃಹತ್ ಮೆರಣಿಗೆ ನಡೆಸಿದರು.
ನಮೋ ವೇದಿಕೆಯ ಸಂಘಟನಾ ಕಾರ್ಯದರ್ಶಿ ದಿವಾಕರ್ ಬಾವೆ, ಮುಖಂಡರಾದ ಎ.ಎಲ್. ಅರವಿಂದ್, ನಿರಂಜನ್ ಕುಪ್ಪಗಡ್ಡೆ, ಅಶೋಕ್ ನಾಯ್ಕ್, ಡಿ. ಶಿವಯೋಗಿ, ಅರುಣ್ ಪುಟ್ಟನಹಳ್ಳಿ, ಗೀತಾ ಮಲ್ಲಿಕಾರ್ಜುನ್, ಮಲ್ಲಿಕಾರ್ಜುನ್ ಗುತ್ತೇರ್, ಗಜಾನನರಾವ್, ದೇವಕಿ ಪಾಣಿ, ಕುಸುಮಾ ಪಾಟೀಲ್, ಉಮೇಶ್ ಉಡುಗಣಿ, ಎಂ.ಕೆ. ಯೋಗೇಶ್, ಬೆನವಪ್ಪ, ಮಂಜಣ್ಣ ನೇರಲಗಿ, ಆನಂದಪ್ಪ ಕುಪ್ಪಗಡ್ಡೆ, ವಿಜೇಂದ್ರಗೌಡ ಜಡೆ, ಪರಮೇಶ್ವರ ಕಣಸೆ, ಬಸವನಗೌಡ, ಬಸವರಾಜಪ್ಪ ಬಾರಂಗಿ, ಮಂಜಪ್ಪ, ಬೆನವಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post