ಕಲ್ಪ ಮೀಡಿಯಾ ಹೌಸ್ | ಸೊರಬ |
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಕೆರೆಗೆ ನುಗ್ಗಿದ್ದು, 50ಕ್ಕೂ ಹೆಚ್ಚು ಜನರು ಸುರಕ್ಷಿತವಾಗಿ ಪಾರಾಗಿರುವಂತಹ ಘಟನೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಕೊರಕೊಡು ಕ್ರಾಸ್ ಬಳಿ ನಡೆದಿದೆ.
ಆನವಟ್ಟಿ ಇಂದ ಸೊರಬ ಮಾರ್ಗವಾಗಿ ಚಲಿಸುತಿದ್ದ ಖಾಸಗಿ ಬಸ್ಸೊಂದು, ಚಾಲಕನ ನಿಯಂತ್ರಣ ತಪ್ಪಿ ಕುಪ್ಪಗಡ್ಡೆ ಗ್ರಾಮದ ಇರ್ಪಿನ ಕೆರೆಗೆ ನುಗ್ಗಿದೆ ಕೆರೆಯಲ್ಲಿ ನೀರಿರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಸ್‌ನಲ್ಲಿದ್ದ ಪ್ರಯಾಣಿಕರು ಆತಂಕದಿಂದ ಕೂಗಾಡಿದ್ದಾರೆ. ಇನ್ನೇನು ಕೆರೆಗೆ ಬಿದ್ದೇ ಬಿಟ್ಟಿತು ಎನ್ನುವಷ್ಟರಲ್ಲಿ ಕೆರೆ ಪಕ್ಕದ ತಡೆ ಕಲ್ಲುಗಳು ಚಕ್ರಕ್ಕೆ ಸಿಕ್ಕಿ ಬಸ್ #Bus ವೇಗವನ್ನು ನಿಯಂತ್ರಿಸಿವೆ.
ಬಸ್ ಪಲ್ಟಿ ಆಗದೆ ಸರಾಗವಾಗಿ ಕೆರೆ ಪ್ರವೇಶಿಸಿ ನಿಂತು ಅಚ್ಚರಿ ಮೂಡಿಸಿ. ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಬಸ್ ಡಿಕ್ಕಿ ಹೊಡೆದ ಸುದ್ದಿ ತಿಳಿದ ಜನ ಕೆರೆ ಬಳಿ ಧಾವಿಸಿ ನೋಡಿ ಆಶ್ಚರ್ಯ ಚಕಿತರಾದರು. ಅಪಘಾತಕ್ಕೆ ಖಚಿತ ಕಾರಣ ತಿಳಿದು ಬಂದಿಲ್ಲ. ಆದರೆ ಚಾಲಕನ ಅಜಾಗರೂಕತೆ ಜತೆಗೆ ಚಿಕ್ಕ ಕೇರೆ ಏರಿ ತಿರುವು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಅಪಘಾತದಲ್ಲಿ ಕೆಲವೊಬ್ಬರಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಅಪಘಾತದಲ್ಲಿ ಅದೃಷ್ಟಾವಶಾತ್ ಬಸ್’ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















