ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ದಂಡಾವತಿ ನದಿ ಸೇತುವೆಯಿಂದ ಆಕಸ್ಮಿಕವಾಗಿ ನೀರಿಗೆ ಬಿದ್ದ ಶಿಕಾರಿಪುರ ಮೂಲದ ವೃದ್ಧೆಯ ಮೃತ ದೇಹ ನಾಲ್ಕು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಸೋಮವಾರ ಪತ್ತೆಯಾಗಿದೆ.
ಶಿಕಾರಿಪುರ ತಾಲೂಕಿನ ಇಡುಕಿನಹೊಸಕೊಪ್ಪ ಗ್ರಾಮದ ಕೆರಿಯಮ್ಮ (65) ಜುಲೈ 25ರ ಶುಕ್ರವಾರ ಹಳೇಸೊರಬದ ಮಗಳ ಮನೆಯಿಂದ ಪಟ್ಟಣಕ್ಕೆ ಆಗಮಿಸುವಾಗ ದಂಡಾವತಿ ನದಿ ಸೇತುವೆ ಮೇಲಿನಿಂದ ಆಕಸ್ಮಕವಾಗಿ ಕಾಲು ಜಾರಿ ನದಿಗೆ ಬಿದ್ದು ನಾಪತ್ತೆಯಾಗಿದ್ದರು.
ಈ ಕುರಿತು ಸೊರಬ ಠಾಣಾಧಿಕಾರಿಗಳು ಉಡುಪಿ ಮೂಲದ ದಕ್ಷ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಮಾಹಿತಿ ನೀಡಿದ್ದರು.

ವಿಶೇಷವಾಗಿ ಸೊರಬ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ನಾಯ್ಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು. ಕೊನೆಗೂ ನಾಲ್ಕನೇ ದಿನ ಮೃತ ದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು. ಇನ್ನು ನೀರಿನ ರಬಸಕ್ಕೆ ಘಟನಾ ಸ್ಥಳದಿಂದ ದೇಹವು ನೀರಿನ ರಬಸಕ್ಕೆ ಸುಮಾರು ಒಂದೂವರೆ ಕಿ.ಮೀ ದೂರ ತೇಲಿ ಹೋಗಿತ್ತು. 
ಮೃತರು ಮೂವರು ಪುತ್ರಿಯರು ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸೊರಬ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ
(ವರದಿ: ಮಧು ರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post