ಕಲ್ಪ ಮೀಡಿಯಾ ಹೌಸ್ | ಸೊರಬ |
ಈ ಕಾಲಘಟ್ಟದಲ್ಲಿ ವೃತ್ತಿ ಪರತೆಯ ಶಿಕ್ಷಣದಿಂದಾಗಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗಿಂತಲು ಪಠ್ಯ ಚಟುವಟಿಕೆಗೆ ಪೋಷಕರು ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಸಮರ್ಪಣ ಸಂಸ್ಥೆಯ ಮಮತಾ ರಾಜೇಶ್ ಹೇಳಿದರು.
ಪಟ್ಟಣದ ಚಾಮರಾಜಪೇಟೆ ಹಳೆ ಕೋರ್ಟ್ ಕಟ್ಟಡದಲ್ಲಿನ ಸ್ಮಾರ್ಟ್ ಕಿಡ್ಜ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 4-10 ವರ್ಷ ವಯೋಮಿತಿಯ ಮಕ್ಕಳಿಗೆ ನಡೆಸುತ್ತಿರುವ ಬೇಸಿಗೆ ಶಿಬಿರ ಉದ್ಧೇಶಿಸಿ ಮಾತನಾಡಿದರು.
ಮೊದಲೆಲ್ಲ ಬೇಸಿಗೆ ರಜೆ ಬಂದಾಗ ಮಕ್ಕಳು ಅಜ್ಜನ ಮನೆಗೆ ಹೋಗಿ ನೈಸರ್ಗಿಕ ಸವಿಯನ್ನ ಸವಿಯುವ ಮೂಲಕ ವಿಕಸನ ಹೊಂದುತ್ತಿದ್ದರು. ಮಾನವ ಸಂಬಂಧಗಳು ಆಗ ಇಂತಹ ಸಂವಹನದಿಂದ ಗಟ್ಟಿಗೊಳ್ಳುತ್ತಿದ್ದವು. ಈಗ ಅಕ್ಕಪಕ್ಕದ ಮನೆಗಳಿಗೂ ಕಳಿಸಲಾರದಂತಹ ವಿಭಿನ್ನ ಬೆಳವಣಿಗೆ ಸಮಾಜದಲ್ಲಿ ಆಗಿರುವುದು ಖೇದಕರ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಂದಿನ ದಿನಗಳಲ್ಲಿ ಇಂತಹ ಶಿಬಿರಗಳ. ಅವಶ್ಯಕತೆಯಿದೆ. ಆಟೋಟಗಳು, ವಿಶೇಷ ಕ್ರಾಫ್ಟ್ ವರ್ಕ್, ಮೈಂಡ್ ಬೂಸ್ಟಿಂಗ್, ಮಕ್ಕಳೊಂದಿಗೆ ಬೆರೆಯುವಿಕೆ, ಪೇಯಿಂಟಿಂಗ್ ಇಂತಹ ಚಟುವಟಿಕೆಗಳನ್ನು ಮಕ್ಕಳು ಇಷ್ಟ ಪಡುತ್ತವೆ.
-ಸುಮಾ ರವಿಚಂದ್ರನ್, ಪೋಷಕರು
ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಅವಶ್ಯ ಬೇಕಿದೆ. ಮನಸ್ಸಿನ ದೃಢತೆ, ಶಿಕ್ಷಣದ ಪಠ್ಯ, ಹೋಂ ವರ್ಕ್ ನಂತಹ ಏಕತಾನತೆಯಿಂದ ಹೊರಬಂದು ಬೇರೆಬೇರೆ ವಯಸ್ಸಿನ ಮಕ್ಕಳ ಜೊತೆ ಬೆರೆತು, ಕ್ರಿಯಾತ್ಮಕ, ರಚನಾತ್ಮಕ ಚಟುವಟಿಕೆಗೆಯತ್ತ ಮಕ್ಕಳು ಆಸಕ್ತಿಯಿಂದ ಸ್ಪಂದಿಸುತ್ತವೆ. ಮನೆಯಲ್ಲೂ ಪ್ರಯೋಗಕ್ಕೆ ಮುಂದಾಗುತ್ತವೆ.
-ಶಿಲ್ಪಾ. ಮುಖ್ಯ ಶಿಕ್ಷಕಿ ಸ್ವಾಮಿ ವಿವೇಕಾನಂದ ಶಾಲೆ ಸೊರಬ
ಮಕ್ಕಳ ಮನೋವಿಕಾಸಕ್ಕೆ ಪಠ್ಯ ಚಟುವಟಿಕೆಯಷ್ಟೆ ಪಠ್ಯೇತರ ಚಟುವಟಿಕೆಗಳು ಕೂಡ ಪ್ರಮುಖವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಮನೋ ಬೆಳವಣಿಗೆಗೆ ಪೂರಕವಾಗಿ ಶಿಬಿರವನ್ನು ಆಯೋಜಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳು ಪ್ರತಿದಿನ ಪೂರ್ವಭಾವಿ ಸಿದ್ಧತೆಯ ಮೂಲಕ ಮಕ್ಕಳೊಂದಿಗೆ ಬೆರೆಯುವುದರಿಂದ ಮಕ್ಕಳು ಉತ್ಸಾಹದಿಂದ ಗ್ರಹಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ.
Also read: ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ: ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜ ಅನಾವರಣ
ದೂರದರ್ಶನ, ಮೊಬೈಲ್ ನಂತಹ ಗೀಳಿನಿಂದ ತುಸು ಕಾಲವಾದರೂ ಮಕ್ಕಳನ್ನು ದೂರವಿರಿಸಲು ಶಿಬಿರ ಸಹಕಾರಿಯಾಗಿದೆ. ಮಕ್ಕಳ ನೈತಿಕ ಬೆಳವಣಿಗೆಗೆ, ಸಂಬಂಧಗಳ ಗಾಢತೆಗೆ, ಜೀವನದ ಪರಿಪೂರ್ಣತೆಗೆ ಕೇವಲ ಶಿಬಿರ, ಶಿಕ್ಷಣ ಸಂಸ್ಥೆಗಳ ಹೊಣೆಯಷ್ಟೆ ಅಲ್ಲ. ಪೋಷಕರ, ಕುಟುಂಬದ, ಸಮಾಜದ ಪಾತ್ರವೂ ಮುಖ್ಯ ಎಂಬುದನ್ನು ನಾವು ಅರಿಯಬೇಕಿದೆ ಎಂದರು.
ಮಕ್ಕಳಿಗೆ ಕಥೆ, ಕ್ರಾಫ್ಟ್ ಚಟುವಟಿಕೆಗಳ ಮುಖೇನ ಸೃಜನಾತ್ಮಕ ಆವರಣವನ್ನು ಮನೆಯಿಂದಲೇ ರೂಪಿಸುವುದು ಉತ್ತಮ. ಮುಖ್ಯವಾಗಿ ಮನೆತನ, ಸ್ಥಳೀಯ ಹಿರಿಮೆ ಗರಿಮೆಗಳನ್ನು ತಿಳಿಸುವ ಮೂಲಕ ಈ ನೆಲದ ಮೇಲೆ ಅಭಿಮಾನ ಮೂಡಿಸುವ ಕೆಲಸ ಎಲ್ಲರದ್ದಾಗಿರುತ್ತದೆ ಎಂದರು.
ಶಿಬಿರದ ಚಟುವಟಿಕೆಗಳ ಕುರಿತು ಸಂಪನ್ಮೂಲ ವ್ಯಕ್ತಿ ಯಶೋದಾ ಗುಂಜನೂರು ವಿವರಿಸಿದರು. ಮಕ್ಕಳ ನೈತಿಕ ಬೆಳವಣಿಗೆಗೆ, ಸಂಬಂಧಗಳ ಗಾಢತೆಗೆ, ಜೀವನದ ಪರಿಪೂರ್ಣತೆಗೆ ಕೇವಲ ಶಿಬಿರ, ಶಿಕ್ಷಣ ಸಂಸ್ಥೆಗಳ ಹೊಣೆಯಷ್ಟೆ ಅಲ್ಲ. ಪೋಷಕರ, ಕುಟುಂಬದ, ಸಮಾಜದ ಪಾತ್ರವೂ ಮುಖ್ಯ ಎಂಬುದನ್ನು ನಾವು ಅರಿಯಬೇಕಿದೆ ಎಂದರು.
ಕವಿತಾ ಶಿಬಿರದ ಸಹಾಯಕಿಯಾಗಿ ಕಾರ್ಯನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post