ಕಲ್ಪ ಮೀಡಿಯಾ ಹೌಸ್ | ಸೊರಬ |
ಬಂದೂಕು ತರಬೇತಿ ಅವಶ್ಯಕತೆ ಇದ್ದು, ಆಯುಧಗಳನ್ನು ಜಾಗೃತೆಯಿಂದ ಬಳಸಬೇಕೇ ವಿನಃ ಅಜಾಗರೂಕತೆ ಸಲ್ಲದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ #Minister Madhu Bangarappa ಹೇಳೀದರು.
ಪಟ್ಟಣದ ರಂಗಮಂದಿರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ #Police Department ವತಿಯಿಂದ ಹಮ್ಮಿಕೊಂಡಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದ #Gun Training Camp ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

Also read: ಲಕ್ಕವಳ್ಳಿ | ಚಿರತೆ ದುರ್ಮರಣ | ಪ್ರಕರಣ ತಡವಾಗಿ ಬೆಳಕಿಗೆ | ಘಟನೆ ನಡೆದಿದ್ದು ಹೇಗೆ?
ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, #Minister Boseraju ಬದುಕಿನಲ್ಲಿ ಎದುರಾಗುವ ಕ್ಲಿಷ್ಟಕರ ಸನ್ನಿವೇಷಗಳನ್ನು ಎದುರಿಸಲು ಆತ್ಮಸ್ಥೆರ್ಯ ಅಗತ್ಯ. ಬಂದೂಕು ತರಬೇತಿ ಪಡೆದವರು ಜವಾಬ್ದಾರಿಯಿಂದ ವರ್ತಿಸಬೇಕು. ಪರವಾನಗಿ ಪಡೆದು ಬಂದೂಕು ಹೊಂದಿರುವವರು ಭಾವೋಧ್ವೇಗಕ್ಕೆ ಒಳಗಾಗಿ ಆಯುಧಗಳ ಬಳಕೆ ಸಲ್ಲದು. ತಾಳ್ಮೆಯಿಂದ ವರ್ತಿಸುವುದನ್ನು ಅರಿಯಬೇಕು ಎಂದು ತಿಳಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಫೆ.1ರಿಂದ 10ರವರೆಗೆ ನಾಗರೀಕ ಬಂದೂಕು ತರಬೇತಿ ಶಿಬಿರ ನಡೆಸಲಾಯಿತು. ಶಿಬಿರದಲ್ಲಿ 200 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ನಾಲ್ಕು ತಂಡಗಳನ್ನಾಗಿ ವಿಂಗಡಿಸಿ ತರಬೇತಿ ನೀಡಲಾಯಿತು. ಉತ್ತಮವಾಗಿ ಶೂಟಿಂಗ್ ಮಾಡಿದ ಎಚ್. ಸುನೀಲ್ ಕುಮಾರ್, ಕೆ.ಬಿ. ಭಾನುಪ್ರಕಾಶ್, ಶ್ರೀಕೃಷ್ಣ, ಜೆ. ಮಿಥುನ್ ಪ್ರಥಮ ಸ್ಥಾನ, ಎಂ.ಬಿ. ಲೋಕೇಶ್, ಎಸ್.ಎಂ. ಸಾಗರ್, ಡಿ.ಕೆ. ಕಿಶೋರ್, ಎಚ್.ಕೆ. ಅವಿನಾಶ್ ದ್ವಿತೀಯ ಸ್ಥಾನ ಹಾಗೂ ವಿ. ವಿಶಾಲ್, ಎಂ.ಆರ್. ರದೀಶ್, ಡಿ.ಬಿ. ಕಿರಣ್‌ಕುಮಾರ್, ವೈಷ್ಣವಿ ಎಂ. ವೈದ್ಯ ತೃತೀಯ ಸ್ಥಾನ ಪಡೆದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಟಿ.ಪಿ. ಕೃಷ್ಣಮೂರ್ತಿ, ಶಿಕಾರಿಪುರ ಡಿವೈಎಸ್‌ಪಿ ಕೇಶವ್, ಸಿಎಪಿಐ ಎಲ್. ರಾಜಶೇಖರ್, ಪಿಎಸ್‌ಐ ನಾಗರಾಜ್ ಸೇರಿದಂತೆ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post