ಕಲ್ಪ ಮೀಡಿಯಾ ಹೌಸ್ | ಸೊರಬ |
ಭೂಮಿತಾಯಿಯ ಸೀಮಂತದ ಆಚರಣೆ ತಾಲ್ಲೂಕಿನಾದ್ಯಂತ ಸಂಭ್ರಮ ಸಡಗರದಿಂದ ಮಂಗಳವಾರ ಮತ್ತು ಬುಧವಾರ ಜರುಗಿತು.
ಇಲ್ಲಿನ ಕೃಷಿಕರು ತಾವು ಬೆಳೆದ ಬೆಳೆಗೆ ಹಸಿರು ವಸ್ತ್ರ ಹೊದಿಸಿ, ಸಿಹಿ ಅಡುಗೆ ಎಡೆ ಇರಿಸಿ ಭೂಮಿತಾಯಿಯ ಬಯಕೆ ತೀರಿಸಿದರು.
ಮಲೆನಾಡ ವಿಶೇಷ:
ಜಿಲ್ಲೆಯ ಸಾಗರ, ಹೊಸನಗರ, ಸೊರಬ ಭಾಗದಲ್ಲಿ ಭೂಮಿಹುಣ್ಣಿಮೆಯಂದು ಕಲಾತ್ಮಕ ಬುಟ್ಟಿ ರಚಿಸಿ ಪೂಜೆಗೆ, ಚರಗು ಬೀರಲು ಬಳಸುವ ಪಾರಂಪರಿಕ ಕಲೆ ಇನ್ನೂ ಜೀವಂತವಾಗಿದ್ದು, ಕಲಾತ್ಮಕ ಭೂಮಣ್ಣಿ ಬುಟ್ಟಿಗಳು ಗಮನಸೆಳೆದವು.
ಸೂಕ್ಷ್ಮಜೀವಿಗಳ ವೃದ್ಧಿ:
ಕೋರಿಯಾ ಟೆಕ್ನಾಲಜಿಯಲ್ಲಿ ಕೃಷಿಗಾಗಿ ಐಎಂಒ ಹೆಸರಿನ ಅನ್ನ ಬೆಲ್ಲದ ಮಿಶ್ರಣವನ್ನು ತಯಾರಿಸಿ ಮೈಕ್ರೋ ನ್ಯೂಟ್ರಂಟ್ ವೃದ್ಧಿಸುವ ಪದ್ಧತಿಯಿಂದು ಮಾನ್ಯತೆ ಪಡೆದಿದೆ. ಇಂತಹ ಪದ್ಧತಿ ಭಾರತದಲ್ಲಿ ಪ್ರಾಚೀನ ಕಾಲದಲ್ಲಿಯೆ ಇತ್ತು ಎನ್ನಲು ಈ ಆಚರಣೆ ಬಹುಮುಖ್ಯ ಆಧಾರವಾಗುತ್ತದೆ. ಈ ಕಾಲದಲ್ಲಿ ಭೂಮಿಯಲ್ಲಿ ಸೂಕ್ಷ್ಮ ಜೀವಾಣುಗಳ ಕೊರತೆ ಸಾಮಾನ್ಯ. ಇಂತಹ ಜೀವಾಣುಗಳ ವೃದ್ಧಿಗೆ ಪೂರಕವಾಗಿ ಚರಗು ತಯಾರಾಗುತ್ತಿದ್ದು ಪ್ರಾಚೀನರ ಕೃಷಿ ತತ್ಪರತೆಯನ್ನು ಪ್ರತಿಯೊಬ್ಬ ಕೃಷಿಕನೂ ಮನನ ಮಾಡಿಕೊಳ್ಳಬೇಕಿದೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post