ಕಲ್ಪ ಮೀಡಿಯಾ ಹೌಸ್ | ಸೊರಬ |
ಬಾಲ ಕಾರ್ಮಿಕ ವ್ಯವಸ್ಥೆ ನಿಲ್ಲಬೇಕು, 16 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ಕೆಲಸಕ್ಕೆ ಸೇರಿಸಕೊಳ್ಳಬಾರದು. ನಮ್ಮ ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಎಷ್ಟೇ ಕಷ್ಟ ಬಂದರು ವಿದ್ಯಾಭ್ಯಾಸಕ್ಕೆ ಕೊರತೆಯಾಗದಂತೆ ನೋಡಿಕೊಳ್ಳೋಣ ಆಗ ಮಾತ್ರ ಆ ಮಗು ತನ್ನ ಕಾಲ ಮೇಲೆ ನಿಂತು ಬಾಳುವಂತಾಗುತ್ತದೆ. ಎಂದು ಸಂಸದ ಬಿ. ವೈ. ರಾಘವೇಂದ್ರ MP Raghavendra ತಿಳಿಸಿದರು.
ತಾಲೂಕಿನ ಅನವಟ್ಟಿಯ ವೀರಶೈವ ಸಮುದಾಯ ಭವನದಲ್ಲಿ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟ, ಕಟ್ಟಡ ಕಾರ್ಮಿಕ ಸಂಘ ವತಿಯಿಂದ ಕಾರ್ಮಿಕ ದಿನಾಚರಣೆ 2022 ಮತ್ತು ಇಶ್ರಮ್ ಕಾರ್ಡ್ ವಿತರಣೆ, ಕಾರ್ಮಿಕ ಇಲಾಖೆಯ ಕಿಟ್ ಹಾಗೂ ಗೃಹಲಕ್ಷ್ಮಿ ಬಾಂಡ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಡೆ ಮಠದ ಡಾ. ಮಹಾಂತ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚೆನ್ನವೀರಪ್ಪ , ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬಣ್ಣ, ಆನವಟ್ಟಿ ಒಕ್ಕೂಟದ ಅಧ್ಯಕ್ಷ ಅಜಿತ್ ಕುಮಾರ್, ವಿರೇಶ್ ಮೇಸ್ತ್ರಿ, ಜಿಲ್ಲೆಯ KSWC ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
Also read: ಮೇ 3ರಂದು ಪೌರಕಾರ್ಮಿಕರೊಂದಿಗೆ ಒಂದು ಬೆಳಗು ವಿಶಿಷ್ಟ ಕಾರ್ಯಕ್ರಮ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















