Read - 2 minutesಕಲ್ಪ ಮೀಡಿಯಾ ಹೌಸ್ |
ಸೊರಬ |
ಭಾರತ ಕೇವಲ ಭೌಗೋಳಿಕವಾಗಿ ಮಾತ್ರ ಸಮೃದ್ಧ ಅಷ್ಟೇ ಅಲ್ಲ. ಇಲ್ಲಿನ ಅಪಾರ ಸಂಪತ್ತು ಜ್ಞಾನ ಎಂದು ಹಿರೇಮಠ ಶಿವಯೋಗ ಮಂದಿರದ ಚಿದಾನಂದಸ್ವಾಮಿ ಹೇಳಿದರು.
ಸೊರಬ ತಾಲ್ಲೂಕಿನ ನಡಹಳ್ಳಿ ವಿದ್ವಾನ್ ರಂಗನಾಥ ಶರ್ಮಾ ಹೆಸರಲ್ಲಿ ಪ್ರತಿ ವರ್ಷಕೊಡಮಾಡುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾಂಸ್ಕೃತಿಕ ಶ್ರೀಮಂತಿಕೆಯ ಈ ನೆಲೆಯಲ್ಲಿ ಭಾವ, ಶಾಸ್ತ್ರ ಸಂಪತ್ತುಗಳಿಂದ ಸಮೃದ್ಧ ಗೊಂಡಿದೆ. ಶರಣರು, ಸಂತರು, ಸಾಧಕರು, ದಾರ್ಶನಿಕರು ಈ ದೇಶವನ್ನು ಸಮೃದ್ಧಗೊಳಿಸಿದ್ದಾರೆ ಎಂದ ಅವರು ಮಹಾಮಹೋಪಾಧ್ಯಾಯ ರಂಗನಾಥ ಶರ್ಮರು ಸಂಸ್ಕೃತ ಭಾಷೆಯಿಂದ ಅಭಿವ್ಯಕ್ತವಾದ ಎಲ್ಲಾ ರೂಪಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಜೊತೆಗೆ ಕನ್ನಡ ಸಾಹಿತ್ಯದಲ್ಲೂ ಅಪಾರ ಸೇವೆಗೈದಿದ್ದಾರೆ ಎಂದು ಸ್ಮರಿಸಿಕೊಂಡರು.
Also read: ಮಾನವೀಯತೆಯ ಔಷಧಿ ನೀಡಿದ ಸಾಮಾಜಿಕ ವೈದ್ಯ ಅಂಬೇಡ್ಕರ್: ಡಾ. ಅರ್ಜುನ ಗೋಳಸಂಗಿ ಅಭಿಪ್ರಾಯ
ಪ್ರಶಸ್ತಿ ಸ್ವೀಕರಿಸಿದ ಸುಮಾ ದೇಸಾಯಿ ಮಾತನಾಡಿ, ಪ್ರಶಸ್ತಿ, ಪುರಸ್ಕಾರಗಳು ವ್ಯಕ್ತಿಯವ್ಯಕ್ತಿತ್ವ ನಿಷ್ಕರ್ಷಣೆ ಒಳಪಡಿಸುವ ಸಾಧನಗಳಿದ್ದಂತೆ ಎಂದರು.ಈ ಸಮಾರಂಭ ಬಾಗಲಕೋಟೆ ಪಾಲಿಟೆಕ್ನಿಕ್ ಬಸವೇಶ್ವರ ಕಾಲೇಜು ಆವರಣದಲ್ಲಿ ಈಚೆಗೆ ಜರುಗಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ನಡೆದ ಸಮಾರಂಭದಲ್ಲಿ ಎಸ್.ಜಿ. ಕೋಟಿ ಅಧ್ಯಕ್ಷತೆವಹಿಸಿದ್ದರು. ರಘುನಂದನ ಭಟ್, ಜಿ.ಬಿ. ದಾನ ಶೆಟ್ಟಿ, ಶಿವಾನಂದ ದೇಸಾಯಿ, ನಾರಾಯಣ ಶೆವರೆ ಇದ್ದರು.
Discussion about this post