ಅಪಾರ ವನಮೂಲಿಕೆ ಇರುವ, ಸನಿಹದಲ್ಲೇ ಐತಿಹಾಸಿಕ ದೇವಸ್ಥಾನ ಇರುವ ಪಟ್ಟಣದ ತಿರುಮಲ ಪುರ ಗುಡ್ಡ ಅಗೆತ ನಡೆಯುತ್ತಿದ್ದು, ಈ ಗುಡ್ಡದ ಕಿರಿದಾದ ಅರಣ್ಯದಲ್ಲಿ ಅಪರೂಪದ ಔಷಧೀಯ ಸಸ್ಯಗಳು ಇವೆ. ಪಕ್ಷಿಪ್ರಾಣಿಗಳ ಸುರಕ್ಷಿತ ಸ್ಥಳವಾಗಿದೆ. ಈ ಬಗ್ಗೆ ಪಟ್ಟಣ ನಾಗರೀಕರು, ಪರಿಸರಾಸಕ್ತರು ಪುರಸಭೆ ಅಧಿಕಾರಿಗಳಿಗೆ, ತಹಶಿಲ್ದಾರರಿಗೆ ವಿನಾಶ ತಡೆಯುವಂತೆ ಮನವಿ ಸಲ್ಲಿಸಿದ್ದಾರೆ.
ಈಚೆಗೆ ಸರ್ಕಾರಿ ಭೂಮಿಗಳ ಒತ್ತೂವರಿ ಕಾರ್ಯ ಬರದಿಂದ ಸಾಗಿದ್ದು, ರಾತ್ರಿ ಬೆಳಗಾಗುವುದರೊಳಗೆ ಅಲ್ಲಿ ಏನಿತ್ತು ಏನಿಲ್ಲ ಎಂದು ಸುಳಿವು ಸಿಗದಂತಹ ಕಾರ್ಯ ಚಟುವಟಿಕೆ ಗಳು ನಡೆಯುತ್ತವೆ.
Also read: ಕೃಷಿ ಸಬಲೀಕರಣಕ್ಕೆ ನೆರವಾಗಿ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಸೂಚನೆ
ಈಚೆಗೆ ಪಟ್ಟಣದ ಆರಾಧ್ಯದೈವ ರಂಗನಾಥ ಸ್ವಾಮಿ ದೇವಸ್ಥಾನ ದ ಕೆಳಭಾಗದಲ್ಲಿ ಗುಡ್ಡದ ಅಂಚನ್ನು ಜೆಸಿಬಿ ಮೂಲಕ ಕಡಿದಿದ್ದು ಅಲ್ಲಿದ್ದ ಅನೇಕ ಮರಗಳನ್ನು ಕೆಡವಿ ಗುರುತು ಸಿಗದಂತೆ ಮುಚ್ಚಲಾಗಿದೆ. ಈ ಕೃತ್ಯದಿಂದಾಗಿ ಗುಡ್ಡದ ಮೇಲಿನಿಂದ ಮಳೆಗಾಲದಲ್ಲಿ ಹರಿವ ನೀರು ಅಲ್ಲೆ ಹತ್ತಿರದಲ್ಲಿರುವ ನದಿಗೆ ಸೇರಿ ನದಿ ಕ್ರಮೇಣ ಮುಚ್ಚುವ ಸಾಧ್ಯತೆ ಇದೆ. ಹತ್ತಿರವಿರುವ ಜಮೀನುಗಳ ಬೆಳೆಗೂ ತೊಂದರೆ ಆಗಲಿದೆ ಎಂದು ಪರಿಸರಾಸಕ್ತರು ಮನವಿಯಲ್ಲಿ ತಿಳಿಸಿದ್ದಾರೆ.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















