ಕಲ್ಪ ಮೀಡಿಯಾ ಹೌಸ್ | ಸೊರಬ |
ಸುಳ್ಳು ಕಾಡುಗಳನ್ನು ಸೇರಿಸಿದ್ದರೂ ಶೇ.33 ಕ್ಕೆ ಇನ್ನೂ ಶೇ.15 ರಷ್ಟು ಅರಣ್ಯ ಭಾರತದಲ್ಲಿ ಕೊರತೆಯಿದೆ. ಏಕರೂಪದ ಯಾವುದೇ ಅರಣ್ಯ ಜೀವವೈವಿಧ್ಯ ಸಂರಕ್ಷಣೆಗೆ ಪೂರಕವಲ್ಲ ಎಂದು ಪಶ್ಚಿಮಘಟ್ಟ ಉಳಿಸಿ ಆಂದೋಲನದ ಪ್ರೊ. ಬಿ.ಎಂ. ಕುಮಾರಸ್ವಾಮಿ ಹೇಳಿದರು.
ಜೀವ ವೈವಿಧ್ಯ ಮಂಡಳಿ, ತಾಪಂ ಜೀವ ವೈವಿಧ್ಯ ನಿರ್ವಹಣಾ ಸಮಿತಿ, ವೃಕ್ಷಲಕ್ಷ ಆಂದೋಲನ, ಪರಿಸರ ಜಗೃತಿ ಟ್ರಸ್ಟ್ ಆಶ್ರಯದಲ್ಲಿ ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಹಮ್ಮಿಕೊಂಡಿದ್ದ ಹಸಿರು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅಧ್ಯಕ್ಷತೆ ವಹಿಸಿ ಮಲೆನಾಡು ಗ್ರಾಮಗಳ ಸಾಮಾಹಿಕ ನೈಸರ್ಗಿಕ ಭೂಮಿ, ಜಲ ಸಂರಕ್ಷಣೆ ಕುರಿತ ನಿರ್ಣಯಗಳನ್ನು ಬಿಡುಗಡೆ ಗೊಳಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜೀವೈಮಂ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕ ಮಾತನಾಡಿದರು.
Also read: ಮಹಿಳಾ-ಯುವ ಮತದಾರರ ಒಲವಿನಿಂದ ಮಧು ಗೆದ್ದರು ಅನಿತಾ ಮಧು ಬಂಗಾರಪ್ಪ
ರಾಜ್ಯ ಜೀವೈಮಂ ಸದಸ್ಯ ಕೆ. ವೆಂಕಟೇಶ್, ಪರಿಸರ ವಿಷಯ ತಜ್ಞರು, ಕಾರ್ಯಕರ್ತರು ಆದ ರಾಜಾರಾಂ ಹಲಸಿನಕೊಪ್ಪ, ಅನೆಗುಳಿ ಸುಬ್ರಾವ್, ರಘುನಂದನ ಭಟ್ ನರೂರು, ಅನಂತರಾಮ್ ಹಾರೊಗೊಪ್ಪ, ಚಕ್ರವಾಕ ಸುಬ್ರಹ್ಮಣ್ಯ, ಗಣಪತಿ ಬಿಸಲಕೊಪ್ಪ, ಬರಿಗೆ ಬಿಎನ್ಸಿ ರಾವ್, ಪಜಾ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಪಾಟೀಲ್, ಆನವಟ್ಟಿ ಎ.ಎಲ್. ಅರವಿಂದ್, ಕುಪ್ಪೆ ಛತ್ರಪತಿಗೌಡ ಪಾಟೀಲ್, ಕೃಷಿ ಸಹಾಯಕ ನಿರ್ದೇಶಕ ಕೆ.ಜಿ. ಕುಮಾರ್, ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಅಣ್ವೇಕರ್, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಶ್ರೀರಾಂ, ತೋಟಗಾರಿಕೆ ಅಧಿಕಾರಿ ದೊರೆರಾಜ್, ಅರಣ್ಯ, ತೋಟಗಾರಿಕೆ ಇಲಾಖೆ, ತಾಪಂ ಸಿಬ್ಬಂದಿ ಮೊದಲಾದವರು ಇದ್ದರು.

- ಗೋಮಾಳ, ಕಾನು, ದೇವರ ಕಾಡು, ಸೊಪ್ಪನ ಬೆಟ್ಟ, ಕೆರೆ ಮುಂತಾದ ಗಾಮ ನೈಸರ್ಗಿ ಸಂಪತ್ತಿನ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ರೈತರ ಸಹಭಾಗಿತ್ವದಲ್ಲಿ ವಿಶೇಷ ಯೋಜನೆ ರೂಪಿಸಬೇಕು
- ತಾಲೂಕಿನಲ್ಲಿ ಕೆರೆಗಳ ಸಂರಕ್ಷಣೆ, ಬಸ್ತಿಕೊಪ್ಪ, ಕುಂಬತ್ತಿಯಲ್ಲಿ ಅಕ್ರಮ
ಗಣಿಗಾರಿಗೆ ನಿಷೇಧಿಸಬೇಕು - ಅರಣ್ಯ ಇಲಾಖೆ ಹಣ್ಣು ಹಾಗೂ ಸ್ಥಳೀಯ ಜಾತಿ ಮರಗಿಡಗಳನ್ನು ಬೆಳೆಸಬೇಕು
- ಡೀಮ್ ಅರಣ್ಯ ರಕ್ಷಣಾ ಅಭಿವೃದ್ಧಿಗೆ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು
(ವರದಿ: ಮಧುರಾಮ್, ಸೊರಬ)










Discussion about this post