ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸಂಸದ ಸಯ್ಯದ್ ನಾಸೀರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದನ್ನು ಖಂಡಿಸಿ, ಬಿಜೆಪಿ ಯುವಮೋರ್ಚಾ ವತಿಯಿಂದ ಪಟ್ಟಣದ ರೈತ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಯುವಮೋರ್ಚಾ ಅಧ್ಯಕ್ಷ ರಾಜು ಮಾವಿನಬಳ್ಳಿ ಕೊಪ್ಪ ಮಾತನಾಡಿ, ದೇಶ ವಿರೋಧಿ ಚಟುವಟಿಕೆ ನಡೆಸುವವರು ವಿಧಾನಸೌಧದಲ್ಲಿ ಕುಳಿತು ವಿರೋಧಿ ದೇಶದ ಪರವಾಗಿ ಘೋಷಣೆ ಕೂಗುತ್ತಾರೆ. ಈಗಿನ ಆಡಳಿತ ಅದನ್ನು ಕೇಳಿದ್ದರೂ ಕೇಳದಂತೆ ಜಾಣ ಕಿವುಡಾಗಿದ್ದು ತನ್ನ ಅಸಲಿ ಹಸಿರು ಮುಖವನ್ನು ಪ್ರದರ್ಶಿಸುತ್ತಿದೆ. ತನಿಖೆಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದು ಸಾಬೀತಾದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಸಂವಿಧಾನ ವಿರೋಧಿ, ರಾಷ್ಟ್ರವನ್ನು ಒಡೆಯುವಂಥ ಹೇಳಿಕೆಯನ್ನು ಕೊಟ್ಟಂತಹ ವ್ಯಕ್ತಿಗಳನ್ನು ಕಾಂಗ್ರೆಸ್ ಸುರಕ್ಷಿತವಾಗಿಡಲು ಯತ್ನಿಸುತ್ತಿರುವುದು ಈ ರಾಜ್ಯದ ದುರ್ದೈವ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ವಿರೋದಿ ದೇಶದ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕು ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮಾತನಾಡಿ, ರಾಜ್ಯಸಭಾ ಸದಸ್ಯರ ಹಿಂಬಾಲಕರು ವಿಧಾನಸೌಧದಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದು ಕಾಂಗ್ರೆಸ್ ಸರ್ಕಾರದ ಅಧೋಗತಿಯನ್ನು ತೋರಿಸುತ್ತದೆ. ಅಪರಾಧಿಗಳನ್ನು ಪೋಷಿಸುತ್ತಿರುವ ಕಾಂಗ್ರೆಸ್ ನಿರಂತರವಾಗಿ ಅಧಿಕಾರದಲ್ಲಿರಲು ಏನೂ ಬೇಕಾದರೂ ಮಾಡಬಹುದು ಎಂಬುದಕ್ಕೆ ಮೊನ್ನೆ ನಡೆದ ಘಟನೆಯೇ ಸಾಕ್ಷಿಯಾಗಿದೆ. ಈಗಿನ ಈ ಕೃತ್ಯಕ್ಕೆ ಮುಂದಾಗುವ ಎಲ್ಲ ವಿದ್ರೋಹಿ ಪರಿಣಾಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
Also read: ಅಕ್ರಮ ಮರಳು ಸಾಗಾಣಿಕೆ, ಎರಡು ಟಿಪ್ಪರ್ ಅರಣ್ಯ ಇಲಾಖೆ ವಶಕ್ಕೆ
ಈ ಸಂದರ್ಭದಲ್ಲಿ ತಾಲೂಕು ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ, ಹರೀಶ್ ಎಸ್, ಸಂಜಯ್ ಗೌಡ, ಡಾ. ಜ್ಞಾನೇಶ್, ರಾಜು ಕೆಂಚಿಕೊಪ್ಪ, ಶಿವಕುಮಾರ್ ಕಡಸೂರು,ಗುರುಕುಮಾರ್ ಪಾಟೀಲ್, ವಿಜಯೇಂದ್ರ ಕುಮಾರ್, ವಿನಾಯಕ ತವನಂದಿ, ಡಿ. ಶಿವಯೋಗಿ, ಕೇಶವ್, ದೇವೇಂದ್ರಪ್ಪ ಚನ್ನಾಪುರ, ಜಗದೀಶ್, ವಿರೇಂದ್ರ ಪಾಟೀಲ್, ಮಾಲತೇಶ್, ಗೌರಮ್ಮ ಭಂಡಾರಿ, ಸುಧಾ ಶಿವ ಪ್ರಸಾದ್, ಬಸವರಾಜ್, ಪರಶುರಾಮ್, ಈರೇಶಪ್ಪ ಮೇಸ್ತ್ರಿ, ಎಮ್ ಡಿ ಉಮೇಶ್, ಮದುರಾಯ್ ಶೇಟ್, ಪ್ರಸನ್ನ ಶೇಟ್, ಪುನೀತ್ ಸೇರಿದಂತೆ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post