ಕಲ್ಪ ಮೀಡಿಯಾ ಹೌಸ್ | ಸೊರಬ |
ಅಂಗವೈಕಲ್ಯತೆ ಸಾಧನೆಗೆ ಎಂದು ಅಡ್ಡಿಯಾಗದು ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.
ಅಂಗವೈಕಲ್ಯತೆ ಶಾಪವಲ್ಲ, ಇದು ದೇವರು ಕೊಟ್ಟ ವರ ಎಂದು ಭಾವಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಇದಕ್ಕೆ ನಿದರ್ಶನ ಕುಮಾರಿ ಗಮನ,ಗಮನ ಹೆಸರಿಗೆ ತಕ್ಕ ಹಾಗೆ ಎಲ್ಲರ ಗಮನ ಸೆಳೆದಿದ್ದಾಳೆ ಇವಳ ಆತ್ಮಸ್ಥೈರ್ಯ ಎಲ್ಲರೂ ಮೆಚ್ಚುವಂತಹದು, ಇವಳ ಸಾಧನೆ ಯುವ ಪೀಳಿಗೆಗೆ ಮಾದರಿ ಎಂದರು.
ಸೊರಬ ತಾಲೂಕಿನ ಹಾಲಗಲಳೆ ಗ್ರಾಮದ ಪತ್ರಕರ್ತ ಶಿವಪ್ಪ ಹಿತ್ಲರ್ ಹಾಗೂ ಶ್ರೀಮತಿ ರಾಜೇಶ್ವರಿ ಇವರ ಮಗಳಾದ ಕುಮಾರಿ ಗಮನ ಹಿತ್ಲರ್ ಇವರನ್ನು ಸನ್ಮಾನಿಸಿ ಮಾತನಾಡಿದರು.
ಈ ವಿದ್ಯಾರ್ಥಿನಿ ವಾಕ್ ಮತ್ತು ಶ್ರವಣ ದೋಷದಿಂದ ಅಂಗವಿಕಲಳಾಗಿದ್ದು, ಇದ್ಯಾವುದನ್ನೂ ಲೆಕ್ಕಿಸದೆ ಸಾಮಾನ್ಯ ವಿದ್ಯಾರ್ಥಿಗಳಂತೆ ಓದಿ ಎಸ್, ಎಸ್, ಎಲ್, ಸಿ ಪರೀಕ್ಷೆಯಲ್ಲಿ ಶೇಕಡ 66.58 ಗಳಿಸಿದ್ದಾಳೆ.ಪಠ್ಯತರ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದಾಳೆ. ಇವಳ ಈ ಸಾಧನೆಯನ್ನು ಗುರುತಿಸಿ ಜನಸಂಗ್ರಾಮ ಪರಿಷತ್, ಯುವ ಬ್ರಿಗೇಡ್, ನಮ್ಮೂರು ಅಭಿವೃದ್ಧಿ ಸಂಸ್ಥೆ, ಯುವಶಕ್ತಿ, ಅಕ್ಕನ ಬಳಗ, ಸ್ನೇಹ ಸುರಭಿ ಮಹಿಳಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಚಾಲಕ ಮಹೇಶ್ ಕಾರ್ವಿ, ರಾಘವೇಂದ್ರ ಎಸ್, ಅಕ್ಕನ ಬಳಗದ ಅಧ್ಯಕ್ಷ ರೇಣುಕಮ್ಮ ಗೌಳಿ, ಸ್ನೇಹ ಸುರಭಿ ಮಹಿಳಾ ಸಂಘದ ಸರಸ್ವತಿ ನಾವುಡ, ಶ್ರೀ ಮಂಜು, ವಿನೋದ್ ವಾಲ್ಮೀಕಿ, ಶಿಕ್ಷಕ ರಮೇಶ್ ಕಲ್ಲಂಬಿ, ರಂಗನಾಥ ಮೊಗವೀರ, ಕೃಷ್ಣ ಮೊಗವೀರ, ದೈಹಿಕ ಶಿಕ್ಷಕರ ಧರ್ಮಪ್ಪ ಯಲವಳ್ಳಿ,ಗಂಧರ್ವ,ಪೋಷಕರಾದ ಪತ್ರಕರ್ತ ಶಿವಪ್ಪ, ಶ್ರೀಮತಿ ರಾಜೇಶ್ವರಿ, ಸಾಧನ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post