ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಜಯದಶಮಿ #Vijayadashami ಅಂಗವಾಗಿ ಹಾಗೂ ಆರ್‌ಎಸ್‌ಎಸ್ #RSS ಸ್ಥಾಪನೆಯಾಗಿ ಶತಮಾನ ಪೂರೈಸಿದ ಹಿನ್ನೆಲೆ ಪಟ್ಟಣದಲ್ಲಿ ಶನಿವಾರ ಸಂಘದ ಸ್ವಯಂಸೇವಕರಿಂದ ಪಥ ಸಂಚಲನ ನಡೆಸಲಾಯಿತು.
ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಕರು ಆಕರ್ಷಕ ಹಾಗೂ ಶಿಸ್ತು ಬದ್ಧವಾಗಿ ಪಥಸಂಚಲನ ನಡೆಸುವ ಮೂಲಕ ಸಂಚಲನ ಮೂಡಿಸಿದರು. ಜನರಲ್ಲಿ ರಾಷ್ಟçಪ್ರೇಮ ಮೂಡಿಸುವ ಉದ್ದೇಶದಿಂದ ನಡೆಸಲಾದ ಪಥಸಂಚಲನದಲ್ಲಿ ಸುಮಾರು 200ಕ್ಕೂ ಅಧಿಕ ಸ್ವಯಂಸೇವಕರು ಭಾಗಿಯಾಗಿದ್ದರು. ಚಿಕ್ಕ ಮಕ್ಕಳು ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಚಾಮರಾಜಪೇಟೆಯ ಕಾನುಕೇರಿ ಮಠದಿಂದ ಆರಂಭವಾದ ಪಥ ಸಂಚಲನ ಶ್ರೀರಂಗನಾಥ ದೇವಸ್ಥಾನ, ಚಿಕ್ಕಪೇಟೆ, ನಾಮದೇವ ಗಲ್ಲಿ, ಮುಖ್ಯರಸ್ತೆ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ ವೃತ್ತ ಪುನಃ ಚಾಮರಾಜಪೇಟೆ ಮಾರ್ಗವಾಗಿ ಕಾನುಕೇರಿ ಮಠದ ವರೆಗೆ ನಡೆಯಿತು. ಪಥಸಂಚನ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು ಭಾರತಮಾತೆ ಮತ್ತು ಭಗವಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಪ್ರಸ್ತುತ ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವನ್ನಾಗಿ ಬದಲಾಗುತ್ತಿದೆ. ಪ್ರಾಚೀನ ಕಾಲದಿಂದಲೂ ದೇಶದ ಉತ್ಪನ್ನಗಳಿಗೆ ಜಾಗತಿಕವಾಗಿ ಬೇಡಿಕೆ ಇತ್ತು. ಇಲ್ಲಿನ ಕೌಶಲ್ಯಗಳನ್ನು ಹತ್ತಿಕ್ಕುವ ಹುನ್ನಾರವನ್ನು ಬ್ರಿಟೀಷರು ಮಾಡಿದ್ದರು. ಆದರೆ, ಆಯುರ್ವೇದ, ಆಧ್ಯಾತ್ಮ ಸೇರಿದಂತೆ ಹಲವು ವಿಷಯಗಳನ್ನು ಮಂಡಿಸುವ ಮೂಲಕ ದೇಶ ಜಾಗತಿಕವಾಗಿ ನೇತೃತ್ವ ವಹಿಸುತ್ತಿದೆ. ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿರುವುದು ದೇಶದ ಅಸ್ಮಿತೆಯ ಭಾಗವಾಗಿ ಮಾರ್ಪಟ್ಟಿದೆ. ವಿಶ್ವವಿದ್ಯಾಲಯಗಳ ಕ್ಯಾಪಸ್‌ನಲ್ಲಿ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಮೂಡಿಸಲು ಸಂಘದ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯು ಶ್ರಮಿಸುತ್ತಿದೆ ಎಂದ ಅವರು, ಯಾವ ಧರ್ಮ ತನ್ನದೇ ಸತ್ಯ ಎಂದು ಬಿಂಬಿಸಲು ಯತ್ನಿಸುತ್ತದೆಯೋ ಅಂತಹ ಧರ್ಮಗಳಿಂದ ರಾಷ್ಟ್ರದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಸರ್ವರನ್ನು ಒಗ್ಗೂಡಿಸಿಕೊಂಡು ಒಳಿತನ್ನು ಬಯಸುವುದು ಹಿಂದೂ ಧರ್ಮ ಮಾತ್ರವಾಗಿದೆ. ಸಮಾಜದಲ್ಲಿನ ಅಸಮಾನತೆಯನ್ನು ತೊಲಗಿಸಿ, ಎಲ್ಲಾ ಜಾತಿಯವರನ್ನು ಒಗ್ಗೂಡಿಸಿಕೊಂಡು ರಾಷ್ಟ್ರದ ಶಕ್ತಿಯನ್ನಾಗಿ ಮಾಡುವ ಕೆಲಸ ಆರ್‌ಎಸ್‌ಎಸ್ ಮಾಡುತ್ತಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post