ಕಲ್ಪ ಮೀಡಿಯಾ ಹೌಸ್ | ಸೊರಬ |
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ #Geetha Shivarajkumar ಅವರು ಚುನಾವಣೆಗೋಸ್ಕರ ಬಾಡಿಗೆ ಮನೆ ಪಡೆದಿದ್ದು ಪರಾಜಿತಗೊಂಡ ನಂತರ ಮತ್ತೆ ಬೆಂಗಳೂರಿಗೆ ವಲಸೆ ಹೋಗುತ್ತಾರೆ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ #Kumar Bangarappa ಲೇವಡಿ ಮಾಡಿದರು.
ಇಂದು ಪಟ್ಟಣದ ಬಿಜೆಪಿ ಕಚೇರಿ ಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಭದ್ರಾವತಿ ವಿಎಸ್‌ಐಎಲ್ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಗಂಧ, ಗಾಳಿ ಗೊತ್ತಿಲ್ಲದ ಗೀತಾ ಶಿವರಾಜಕುಮಾರ್ ಅವರು, ಅವುಗಳ ಉಳಿವು ಹಾಗೂ ಅನುಷ್ಠಾನಕ್ಕೆ ಹೇಗೆ ಮುಂದಾಗಬಲ್ಲರೆಂದು ಜನರು ಯೋಚಿಸಬೇಕಿದೆ. ಗೀತಾ, ನಟ ಶಿವರಾಜಕುಮಾರ್ ಹಾಗೂ ಮಧು ಬಂಗಾರಪ್ಪ #Madhu Bangarappa ಚುನಾವಣೆಗಾಗಿ ಕವಲು ದಾರಿಯಲ್ಲಿದ್ದಾರೆ. ಫಲಿತಾಂಶದ ನಂತರ ಎಲ್ಲರೂ ಫಲಾಯನವಾಗಲಿದ್ದಾರೆ ಎಂದರು.
ಅಕ್ಷರ ಜ್ಞಾನವಿಲ್ಲದ ದುರಂಹಕಾರಿ
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲಿ ದಲ್ಲಾಳಿಗಳ ಮೂಲಕ ಆಡಳಿತ ನಡೆಸುತ್ತಾರೆ. ಜಿಲ್ಲೆಯ ಆಡಳಿತ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ಅಣತಿಯಂತೆ ನಡೆಯುತ್ತಿದೆ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹಲವಾರು ಬಾರಿ ಆರೋಪಿಸಿದ್ದಾರೆ. ಪರಿಹಾರ ಕೇಳಿ ತಮ್ಮಬಳಿ ಬರುವ ಸಮಸ್ಯೆಗಳಿಗೆ ಹಿಂಬಾಲಕರ ಬಳಿ ಕೇಳಿ ಎನ್ನುವ ಸಚಿವರ ಸ್ಥಿತಿ ಹರೆಯದ ಯುವಕನಿಗೆ ಮನೆಯ ಯಜಮಾನಿಕೆ ನೀಡಿದಂತಾಗಿದೆ ಎಂದು ಕುಟುಕಿದರು.
Also read: ತೀವ್ರತರವಾದ ಬಿಸಿಗಾಳಿ ಸಾಧ್ಯತೆ: ಈ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ
ದ್ವೇಷದ ರಾಜಕಾರಣಕ್ಕೆ ಮುಂದಾದ ಮಧು ಬಂಗಾರಪ್ಪ ಸಹೋದರಿಯನ್ನು ಎತ್ತಿ ಕಟ್ಟಿ ಕೊನೆಯ ದಿನಗಳಲ್ಲಿ ತನ್ನ ಸ್ವಾರ್ಥಕ್ಕಾಗಿ ಬಂಗಾರಪ್ಪ #Bangarappa ಅವರನ್ನು ಜೆಡಿಎಸ್ ಕರೆತಂದು ರಾಜಕೀಯವಾಗಿ ಸಂಪೂರ್ಣ ಮುಳುಗಿಸಿದರು. ಕೈ ಮುಷ್ಟಿ ಕಟ್ಟಿದರೆ ಹೆಬ್ಬಟ್ಟು ಹೊರ ಗುಳಿಯುತ್ತದೆ. ಮುಷ್ಟಿಗೆ ಭೂಷಣ ಹೆಬ್ಬರಳೆ. ನಾಲ್ಕು ಬೆರಳು ಒಟ್ಟಾಗಿದ್ದರೂ ಕ್ಷೇತ್ರದಲ್ಲಿ ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಅನ್ನುವ ಮೂಲಕ ತಮ್ಮ ರಾಜಕೀಯನಡೆಯನ್ನು ಸಮರ್ಥಿಸಿಕೊಂಡರು.
ಒಂದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನಯಾ ಪೈಸೆ ಅನುದಾನ ತರದ ಸಚಿವರು, ಚುನಾವಣೆ ಪೂರ್ವದಲ್ಲಿ 6 ಕೋಟಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನು ಮೇಲೆ ಓಡಾಡುತ್ತಿದ್ದರು. ಈಗ ಸಾಲ ತೀರಿಸಲು ಹೇಗೆ ಸಾಧ್ಯವಾಯಿತು ಎಂದ ಅವರು, ವಸೂಲಿ ಮಾಡಿದ ಹಣದಿಂದ ಸಾಲಮುಕ್ತಗೊಂಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗುವುದು ನಿಶ್ಚಿತ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ತಾಲ್ಲೂಕಿನಲ್ಲಿ ತಂದುಕೊಡುವ ಕಾರ್ಯಕರ್ತರು ಮುನಡೆ ನಿಟ್ಟಿನಲ್ಲಿ ಗಮನ ನೀಡುವಂತೆ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post