ಕಲ್ಪ ಮೀಡಿಯಾ ಹೌಸ್ | ಸೊರಬ |
ಬನದ (ಮುತ್ತೈದೆ) ಹುಣ್ಣಿಮೆ #BanadaHunnime ಪ್ರಯುಕ್ತ ತಾಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ #RenukambaTemple ಸಾವಿರಾರು ಭಕ್ತರು ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.
ದಕ್ಷಿಣಾಯನದ ಧರ್ನುಮಾಸ ಮುಕ್ತಾಯಗೊಂಡು ಉತ್ತರಾಯಣ ಆರಂಭದ ಪರ್ವಕಾಲಕ್ಕೂ ಮುನ್ನಾ ದಿನ ಬನದ ಹುಣ್ಣಿಮೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
Also Read>> ಬೆಂಗಳೂರು | ಬಾಲಕಿ ಅತ್ಯಾಚಾರ, ಹತ್ಯೆ | ಆರೋಪಿ ಬಂಧನ
ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಹರಿಹರ, ಶಿಕಾರಿಪುರ ಹಾಗೂ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದಿವ್ಯದರ್ಶನ ಪಡೆದು ಉಧೋ ಉಧೋ ಎಂದು ಜೈಕಾರ ಹಾಕಿದರು.

ದೇವರ ಹೆಸರಿನಲ್ಲಿ ಭಕ್ತರು ಧಾರ್ಮಿಕ ಪೂಜಾ ವಿಧಿ ವಿಧಾನಗಳಾದ ಪಡ್ಲಿಗೆ ತುಂಬುವುದು, ಮುಡಿ ನೀಡುವುದು, ಕಿವಿ ಚುಚ್ಚುವುದು, ವಿವಿಧ ಸೇವೆ ನಡೆದವು.
ಒಲೆ ಹೂಡಿ ಅಡಿಗೆ ತಯಾರಿಸಿ ನೈವೇದ್ಯ ಅರ್ಪಿಸಿ ಬಂಧು ಬಳಗದವರ ಜತೆ ಭೋಜನ ಸವಿದರು. ಸಂಜೆ ದೇವಸ್ಥಾನದಿಂದ ಆರಂಭಗೊಂಡ ಪಲ್ಲಕ್ಕಿ ಉತ್ಸವ ರಥ ಬೀದಿ ಸೇರಿದಂತೆ ವಾದ್ಯ ಮೇಳಗಳೊಂದಿಗೆ ಸಾಗಿತು. ದೇವಸ್ಥಾನದ ಆವರಣದಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿತ್ತು. ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post