ಕಲ್ಪ ಮೀಡಿಯಾ ಹೌಸ್ | ಸೊರಬ |
2023 24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ #SSLC Result ಹಳೇ ಸೊರಬ ಸರ್ಕಾರಿ ಪ್ರೌಢ ಶಾಲೆ ಶೇ.91 ಫಲಿತಾಂಶ ಪಡೆದುಕೊಂಡಿದೆ. ಆಂಗ್ಲಮಾಧ್ಯಮದಲ್ಲಿ ಶೇ.100 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ.
ರಕ್ಷಾಶ್ರೀ 625ಕ್ಕೆ 622 ಶೇ 99.52 ಅಂಕಗಳನ್ನು ಪಡೆಯುವುದರ ಮೂಲಕ ತಾಲ್ಲೂಕಿಗೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡಿರುದ್ದಾರೆ.
Also read: ಶಿವಮೊಗ್ಗ | ಕಾಂಗ್ರೆಸ್’ಗೆ ಬಂಡಾಯದ ಬಿಸಿ | ಎಸ್.ಪಿ. ದಿನೇಶ್ ಸ್ವತಂತ್ರ ಸ್ಪರ್ಧೆ ಘೋಷಣೆ
ಸೃಜನ್ ವಿ 625 ಕ್ಕೆ 600 ಶೇಕಡ 96 ಅಂಕ, ಸೂರಜ್ ಜೋಶಿ 625ಕ್ಕೆ 600 ಶೇ. 96 ಅಂಕ ಹಾಗೂ ಸೂರಜ್ ಬಿ ಜೆ 625ಕ್ಕೆ 595 ಶೇಕಡ 95.2 ಅಂಕ ಪಡೆದುಕೊಂಡಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಸರ್ಕಾರಿ ಪ್ರೌಢಶಾಲೆ ಹಳೆಸೊರಬ ಅಧ್ಯಕ್ಷರು ಸದಸ್ಯರು ಎಸ್.ಡಿ.ಎಂ.ಸಿ ಸರ್ಕಾರಿ ಪ್ರೌಢಶಾಲೆ ಹಳೆ ಸೊರಬ ಮತ್ತು ಪೋಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post