ಕಲ್ಪ ಮೀಡಿಯಾ ಹೌಸ್
ಸೊರಬ: ಮುಂಬರುವ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಸರಕಾರ ಬಿಡುಗಡೆಗೊಳಿಸಿರುವ ಮೀಸಲಾತಿಯಲ್ಲಿ ಸೊರಬ ತಾಲ್ಲೂಕಿನ ವಿವಿಧ ಕ್ಷೇತ್ರಗಳಿಗೆ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ ರುದ್ರಗೌಡ, ಸಿ. ಪಾಟೀಲ್ ಆರೋಪಿಸಿದರು.
ಪ್ರಬಲ ಸಮುದಾಯಗಳು ಇರುವ ಕಡೆ ಬೇರೆ ಬೇರೆ ಮೀಸಲಾತಿಗಳನ್ನು ಪ್ರಕಟಗೊಳಿಸಿರುವುದು ಆ ಸಮುದಾಯ ಗಳಿಗೆ ಅನ್ಯಾಯವಾಗಿದೆ ಹಾಗೂ ಆನವಟ್ಟಿ ಭಾಗದಲ್ಲಿ ಜಡೆ, ಮೂಡಿ, ತತ್ತೂರು, 3 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿವೆ, ಮೂಡಿ ಕ್ಷೇತ್ರದಲ್ಲಿ ಪ್ರಬಲವಾಗಿ ಲಿಂಗಾಯಿತ ಸಮುದಾಯದವರು ಹೆಚ್ಚಾಗಿದ್ದು, ಇಲ್ಲಿ ಎಸ್ಟಿ ಸಮುದಾಯದ ಮಹಿಳೆಗೆ ಮೀಸಲಾತಿಯನ್ನು ನೀಡಿ ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಚುನಾವಣಾ ಆಯೋಗ ಕೂಡಲೇ ಕ್ಷೇತ್ರಗಳ ಮರು ಸಮೀಕ್ಷೆ ನಡೆಸಿ ಪ್ರತಿ ಸಮುದಾಯಕ್ಕೂ ಅವಕಾಶ ದೊರೆಯುವಂತೆ ನೋಡಿಕೊಳ್ಳಬೇಕು ಈಗಾಗಲೇ ಘೋಷಣೆ ಮಾಡಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಯನ್ನು ರದ್ದುಪಡಿಸಿ ಹೊಸ ಮೀಸಲಾತಿಯನ್ನು ಘೋಷಿಸಿ ‘ಬೇಕೆಂದು ಒತ್ತಾಯಿಸಿದ ಅವರು ಮೀಸಲಾತಿ ಸರಿಪಡಿಸದಿದ್ದರೆ ಕಾನೂನು ರೀತಿ ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post