ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕಿನ ಗುಂಡಶೆಟ್ಟಿ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು, ಸೊರಬದ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ 1 ಮತ್ತು 2 ಆಯೋಜಿಸಿದ ವಾರ್ಷಿಕ ವಿಶೇಷ ಶಿಬಿರದ ಆರೋಗ್ಯ ದಿನ ಅಂಗವಾಗಿ, ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ #Cancer ಹಾಗೂ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ವೈದ್ಯರು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವೈದ್ಯೆ ಡಾ. ವಿಜೇತ ಮಾತನಾಡಿ, ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಬಗ್ಗೆ ಜಾಗೃತಿಯ ಅಗತ್ಯತೆಯಿದೆ. ನಿಯಮಿತ ಆರೋಗ್ಯ ತಪಾಸಣೆ, ಎಚ್.ಪಿ.ವಿ ಲಸಿಕೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಕ್ಯಾನ್ಸರ್ ತಡೆಗಟ್ಟುವ ಪ್ರಮುಖ ಮಾರ್ಗವಾಗಿದೆ ಎಂದು ಹೇಳಿದರು.
Also read: ಭಾರತದ ಮಿಲಿಟರಿ ಮಾಹಿತಿ ರವಾನೆ | ಶಂಕಿತ ಪಾಕಿಸ್ತಾನ ಏಜೆಂಟ್ ಬಂಧನ
ದಂತ ವೈದ್ಯ ಡಾ. ಜ್ಞಾನೇಶ್ ತಮ್ಮ ಉಪನ್ಯಾಸದಲ್ಲಿ, ತಂಬಾಕು ಸೇವನೆಯ ತೀವ್ರ ಹಾನಿಕಾರಕ ಪರಿಣಾಮಗಳ ಬಗ್ಗೆ ತಿಳಿಸಿದರು. ನಿಕೋಟೀನ್ ಮತ್ತು ಇತರ ರಾಸಾಯನಿಕಗಳು ಶರೀರಕ್ಕೆ ಹಾನಿ ಮಾಡುತ್ತವೆ. ತಂಬಾಕು ಸೇವನೆಯಿಂದ ಹೃದಯಘಾತ, ಪಾರ್ಶ್ವವಾಯು ಮತ್ತು ಕ್ಯಾನ್ಸರ್‌ನ ಅಪಾಯ ಹೆಚ್ಚುತ್ತದೆ. ಯುವಜನರು ಇದರಿಂದ ದೂರವಿದ್ದು, ಆರೋಗ್ಯಕರ ಜೀವನವನ್ನು ಆರಿಸಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ಗೌರವಾಧ್ಯಕ್ಷ ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. NSS ಘಟಕದ ಯೋಗೇಶ್, ನೇಂದ್ರಪ್ಪ, ವಿದ್ಯಾರ್ಥಿಗಳಾದ ಸಂಜಯ್, ದೀಕ್ಷಿತಾ, ಪವಿತ್ರ.ಸಿ, ಇಂಧುದರ, ವಿಲಾಸ್, ರಕ್ಷಿತಾ, ಹೊಯ್ಸಳ ಸೇರಿದಂತೆ ಹಲವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post