ಕಲ್ಪ ಮೀಡಿಯಾ ಹೌಸ್ | ಸೊರಬ |
ಕೃಷಿಯ ಹೆಚ್ಚೂವರಿ ಗಳಿಕೆಗೆ ನಮ್ಮ ಶ್ರಮಕ್ಕಿಂತಲೂ ಜೇನು ನೊಣಗಳ ಶ್ರಮ ಅಪಾರ, ಬಾಯಿಗೆ ಸಿಹಿ ನೀಡುವ ಜೊತೆಗೆ ಕೃಷಿಗೆ ಸಹಕಾರಿ ಆಗಿರುವ ಜೇನು ಅಭಿವೃದ್ಧಿ ಗೆ ಮುಂದಾಗಬೇಕು ಎಂದು ಜೇನುಕೃಷಿಕ ಗೌತಮ್ ಬಿಚ್ಚುಗತ್ತಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾನಗಲ್ ತಾಲ್ಲೂಕು ಬೆಳಗಾಲಪೇಟೆ ವಲಯ ಪ್ರಗತಿ ಬಂಧು ಸಂಘದ ಸದಸ್ಯರಿಗೆ ತಾಲ್ಲೂಕು ಯಲಸಿ ಗ್ರಾಮದ ಸುವರ್ಣ ನರ್ಸರಿಯಲ್ಲಿ ಜೇನುಕೃಷಿಯ ಕುರಿತು ಅವರು ಮಾಹಿತಿ ನೀಡಿದರು.ಪ್ರಕೃತಿ ಯಲ್ಲಿರುವ ಪ್ರತಿಯೊಂದು ಜೀವಿಯೂ ಮನುಷ್ಯ ಜೀವಿಯ ವಿಕಾಸಕ್ಕೆ, ಅವನ ಬದುಕಿಗೆ ನೆರವಾಗುತ್ತದೆ. ಇಂತಹ ಜೀವಿಗಳಲ್ಲಿ ಜೇನು ನೊಣಗಳು ಕೂಡ ಸಹಕರಿಸುತ್ತವೆ ಎಂದರು.

Also read: ಹಸಿವು ಮುಕ್ತ ಸಮಾಜಕ್ಕಾಗಿ ಫುಡ್ ಆನ್ ವಾಲ್: ಇದೀಗ ಶಿವಮೊಗ್ಗದಲ್ಲಿ ಆರಂಭ
ತಾಲ್ಲೂಕಿನ ಮಾದರಿ ಕೃಷಿ ಘಟಕಗಳಾದ ತಿಮ್ಮಾಪುರದ ಜಿತ್ತುನಾಬಿ ಅವರ ಹಾಳೆ ತಟ್ಟೆ ತಯಾರಿಕೆ, ಬಿಳುವಾಣಿ ರೇಣುಕರಾಜ್ ಅವರ ಮಲ್ಲಿಗೆ ಕೃಷಿ ಪ್ರಾತ್ಯಕ್ಷಿಕೆ, ಮಾವಲಿ ಗ್ರಾಮದ ಪ್ರಕಾಶಗೌಡ ಅವರ ಸಮಗ್ರ ಕೃಷಿ ಘಟಕಗಳಿಗೆ ಭೇಟಿ ನೀಡಿ ಪ್ರಗತಿಬಂಧು ಸದಸ್ಯರಿಗೆ ಮಾಹಿತಿ ನೀಡಲಾಯ್ತು.
ಶಿಬಿರಾರ್ಥಿಗಳ ಸಂಗಡ ಹಾನಗಲ್ ತಾಲ್ಲೂಕು ಕೃಷಿ ಮೇಲ್ವಿಚಾರಕ ಮಾಲತೇಶ್, ಟಿ. ಉಮೇಶ್, ಜೇನು ಘಟಕದ ಶರತ್, ಹೊಯ್ಸಳ, ಸತೀಶ್ ಜೊಯ್ಸ್, ವಿಲಾಸ್ ಇನ್ನೂ ಅನೇಕರು ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post