ಕಲ್ಪ ಮೀಡಿಯಾ ಹೌಸ್ | ಸೊರಬ |
ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಜೊತೆಗೆ ಸಾಂಸ್ಕೃತಿಕ ರಂಗಗಳಲ್ಲಿ ಅವರಿಗಿರುವ ಆಸಕ್ತಿಯನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸಲು ಪೋಷಕರು ಮುಂದಾಗುವಂತೆ ಜನಸಂಗ್ರಾಮ ಪರಿಷತ್ ಅಧ್ಯಕ್ಷ ಶಂಕರ್ ಶೇಟ್ ಕರೆ ನೀಡಿದರು.
ಪಟ್ಟಣದ ಡೀಮ್ಸ್ ಡ್ಯಾನ್ಸ್ ಅಕಾಡೆಮಿ ನೃತ್ಯಶಾಲೆಯ ವಿದ್ಯಾರ್ಥಿ, ಸ್ಟಾರ್ ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದ ರನ್ನರ್ ಅಪ್ ಹರ್ಷಿತ ಆಚಾರ್ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದರು.
ನಮ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವಲ್ಲಿ ನೃತ್ಯವು ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಈ ಶಾಲೆಯ ನೃತ್ಯ ತರಬೇತಿದಾರರಾದ ಸ್ಟೀವನ್ ಮತ್ತು ಪ್ರಶಾಂತ ಡಿ ಕೋಸ್ತ ರವರ ಹೆಚ್ಚಿನ ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದರಿಂದಲೇ ನಿವೇದಿತಾ, ಹರ್ಷಿತ ಹಾಗೂ ಮಹಾಲಕ್ಷ್ಮಿ ಅವರು ನೃತ್ಯಪಟುಗಳಾಗಿ ಟಿವಿ ವಾಹಿನಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿದೆ ಎಂದರು.
ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ. ಜ್ಞಾನೇಶ ಹೆಚ್.ಈ, ನಿಟಕಪೂರ್ವ ಅಧ್ಯಕ್ಷ ನಾಗರಾಜ್ ಗುತ್ತಿಕ್ಲಬ್ ವತಿಯಿಂದ ಸನ್ಮಾನಿಸಿ ಮಾತನಾಡಿ, ಪ್ರತಿಮನೆಯಲ್ಲೂ ಪ್ರತಿಭೆಯುಳ್ಳವರು ಇದ್ದಾರೆ ಅದನ್ನು ಗುರುತಿಸುವಲ್ಲಿ ಪೋಷಕರು ಮುಂದಾಗಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾ ಸಕ್ಕೆ ತೊಂದರೆ ಆಗದಂತೆ ನೃತ್ಯಾಭ್ಯಾಸ ಮಾಡಿ ಇನ್ನೂ ಹೆಚ್ಚಿನ ಸಾಧನೆ ಮಾಡಿ. ಅಹಂಕಾರ ಇರದಿದ್ದರೆ ಇನ್ನೂ ಹೆಚ್ಚಿನ ಶ್ರೇಯಸ್ಸು ಲಭಿಸುತ್ತದೆ ಎಂದು ತಿಳಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post