ಕಲ್ಪ ಮೀಡಿಯಾ ಹೌಸ್ | ಸೊರಬ |
19ನೇ ಶತಮಾನದ ಹೊತ್ತಿಗೆ ಬ್ರಿಟೀಶ್ ಅಧಿಕಾರಿಗಳಿಂದ ಪ್ರಶಂಸೆಗೊಳಗಾಗಿ ಇಂದಿಗೂ ಉತ್ತಮ ಎನ್ನಬಹುದಾದ ಸೊರಬ ತಾಲ್ಲೂಕಿನ ಹಳೇಸೊರಬ ದೇವರ ಕಾಡು ಈ ಹಿಂದೆ ದೇವರಕಾಡಾಗಿ, ಇದೀಗ ಪಾರಂಪರಿಕ ಜೀವವೈವಿಧ್ಯ ತಾಣವಾಗಿ ಘೋಷಿಸಿಕೊಂಡಿದ್ದು ಹೆಮ್ಮೆಯ ಸಂಗತಿ ಎಂದು ವೃಕ್ಷಲಕ್ಷ ಆಂದೋಲನದ ಅನಂತಹೆಗಡೆ ಅಶಿಸರ ಹೇಳಿದರು.
ತಾಲ್ಲೂಕು ಹಳೇಸೊರಬ ದೇವರ ಕಾಡನ್ನು ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.

ಇಂದಿಗೂ ಈ ಅರಣ್ಯದಲ್ಲಿ 800 ವರ್ಷಕ್ಕಿಂತಲೂ ಹಳೆಯದಾದ ಅಪರೂಪದ ವೃಕ್ಷ ಸಮೂಹವಿದೆ, ವೈವಿಧ್ಯ ಸಸ್ಯಸಂಕುಲಗಳಿವೆ, ವೈವಿಧ್ಯ ಪ್ರಾಣಿ ಸಮೂಹವೂ ಇದೆ. ಇದೆಲ್ಲವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಗುರುತರ ಜವಾಬ್ಧಾರಿ ಎಲ್ಲರದ್ದು ಎಂಬ ಉದಾರ ಮನಸ್ಸಿನಿಂದ ಕಾಯ್ದುಕೊಂಡರೆ ಮುಂದಿನ ಪೀಳಿಗೆಗೆ ನಾವು ನೀಡುವ ಮಹತ್ತರ ಕಾಣಿಕೆಯಾಗಿ ಅವರು ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದರು.
Also read: ಜನಪದದಿಂದ ಉತ್ತಮ ಸಮಾಜ ನಿರ್ಮಾಣ

ಫಲಕ ಅನಾವರಣಕ್ಕೆ ಸಾಥ್ ನೀಡಿದ ಪುರಸಭೆ ಅಧ್ಯಕ್ಷ ವೀರೇಶಮೇಸ್ತ್ರಿ ಮತ್ತು ಉಪಾಧ್ಯಕ್ಷ ಜಿ.ಮಧುರಾಯಶೇಟ್ ಅವರನ್ನು ಉದ್ಧೇಶಿಸಿ ಪಟ್ಟಣಕ್ಕೆ ಕಳಶಪ್ರಾಯದಂತಿರುವ ದಂಡಾವತಿ ನದಿಯ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಪುರಸಭೆ ಮುಂದಾಗಬೇಕು. ಪುರಸಭೆ ಜೀವವೈವಿಧ್ಯಮಂಡಳಿಯನ್ನು ಚುರುಕುಗೊಳಿಸುವಲ್ಲಿ ಸಹಕರಿಸಬೇಕು ಎಂದರು.

ಇಒ ಕುಮಾರ್, ಪಿಡಿಒ ಮಲ್ಲಮ್ಮ, ಡಿವೈಆರ್‌ಎಫ್‌ಒ ಯುವರಾಜ್, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಕಾರ್ಯದರ್ಶಿ ಸಿ.ಪಿ.ಈರೇಶಗೌಡ, ರಾಜ್ಯ ಪಿಬಿಆರ್ ಉಪಸಮಿತಿ ತಜ್ಞ ಶ್ರೀಪಾದ ಬಿಚ್ಚುಗತ್ತಿ, ತಾವರೆಹಳ್ಳಿ ಬಸವರಾಜಗೌಡ, ಅರಣ್ಯ ಇಲಾಖೆ, ತಾಪಂ ಅಧಿಕಾರಿ ಸಿಬ್ಬಂದಿ ಇದ್ದರು.


ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















