ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ: ರಾಜ್ಯದಲ್ಲೇ ಮಾದರಿಯಾಗಿ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಯನ್ನು ತಾಲೂಕಿನ ಆನವಟ್ಟಿ ಹೋಬಳಿಯಲ್ಲಿ ನ.15ರ ಮಂಗಳವಾರ ನಡೆಯಲಿದ್ದು, ಅಂತಿಮ ಸಿದ್ಧತೆಗಳನ್ನು ಶಾಸಕ ಕುಮಾರ್ ಬಂಗಾರಪ್ಪ, ಜಿಲ್ಲಾಧಿಕಾರಿ ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಪರಿಶೀಲಿಸಿದರು.
ಈ ಕುರಿತು ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ, ಸಮಾವೇಶಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಇಡೀ ಮಂತ್ರಿ ಮಂಡಲವೇ ಭಾಗವಹಿಸಲಿದ್ದು, ಸುಮಾರು 30 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿ, ಸೋರಬ ತಾಲೂಕಿನ ಅಭಿವೃದ್ಧಿಯ ಕೈಪಿಡಿ, ಪಕ್ಷದ ಎಲ್ಲಾ ಸದಸ್ಯರನ್ನು ಸಂಪರ್ಕಿಸುವ ದಿಕ್ಸೂಚಿ ಆಪ್ ಸಮಾವೇಶದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದರು.
ತಾಲೂಕು ಬಿಜೆಪಿ ಪಕ್ಷದಲ್ಲಿ ಹಳೆಯ ಮುಂಡರುಗಳಲ್ಲಿ ಮನಸ್ಥಾಪಗಳು ಇದ್ದು ಜಿಲ್ಲೆಯ ಮುಖಂಡರುಗಳು ಮಾತುಕತೆಯ ಮೂಲಕ ಮನಸ್ಥಾಪಗಳನ್ನು ಸರಿ ಮಾಡಲಿದ್ದಾರೆ. ನಾವು ಕೂಡ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪತ್ರದ ಮೂಲಕ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಮನವೊಲಿಸುತ್ತೇವೆ. ಪಕ್ಷದಲ್ಲಿ ಯಾರನ್ನೂ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ, ಅವರೆಲ್ಲರೂ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂಬುದು ನನ್ನ ಆಷಾ ಭಾವನೆಯಾಗಿದೆ. ಒಂದು ವೇಳೆ ನಮೋ ವೇದಿಕೆಯವರು ಸಮಾವೇಶಕ್ಕೆ ಬರದೇ ಇದ್ದರೂ ಸಹ ತಾಲೂಕಿನ 239 ಬೂತ್ ಗಳಲ್ಲಿ ನಮ್ಮ ಸಂಘಟನೆ ಬಲವಾಗಿದೆ ಎಂದರು.
ಸಮಾವೇಶದಲ್ಲಿ ವಿಐಪಿಗಳು, ಮುಖಂಡರುಗಳು, ಪಕ್ಷದ ಕಾರ್ಯಕರ್ತರು, ಮಠಾಧೀಶರುಗಳು, ಕಲಾ ಮೇಳಗಳು ಸೇರಿದಂತೆ ಹಲವು ವಿಭಾಗಗಳನ್ನು ವ್ಯವಸ್ಥತವಾಗಿ ಮಾಡಲಾಗಿದೆ. ಈ ಸಮಾವೇಶದಲ್ಲಿ ಸೇರಿರುವ ಜನರಿಗೆ ಊಟೋಪಚಾರ ವ್ಯವಸ್ಥೆ ಮಾಡಲು 600 ಕಾರ್ಯಕರ್ತರನ್ನೊಳಗೊಂಡ 6 ಸಮಿತಿಗಳನ್ನು ರಚಿಸಲಾಗಿದೆ. ಕಾರ್ಯಕ್ರಮದ ಸಭಾಗಂಗಣದ ಮೂಲೆಯಲ್ಲಿ ಚಾಯ್ ಪೆ ಚರ್ಚಾ ಟೆಂಟ್ ನಿರ್ಮಿಸಲಾಗಿದೆ ಎಂದರು.
ಮುಖ್ಯಮಂತ್ರಿಯವರ ಅನುಮತಿ ಮೇರೆಗೆ ಶಾಲಾ ಅವಧಿ ಮುಗಿದ ನಂತರ 4 ಗಂಟೆಗೆ ಹೆಲಿಕಾಪ್ಟರ್ ಮುಖಾಂತರ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಅನೇಕ ನಾಯಕರು ಆಗಮಿಸಲಿದ್ದು ಎಲ್ಲಾ ಕಾರ್ಯಕ್ರಮಗಳು ನಿಗದಿಪಡಿಸಿದ ಸಮಯಕ್ಕೆ ನಡೆಯಲಿವೆ ಎಂದರು.
ಪ್ರಧಾನಮಂತ್ರಿಯವರ ಆದೇಶದ ಮೇರೆಗೆ ಸಮಾವೇಶದಲ್ಲಿ ಹಾರ, ತುರಾಯಿ ಈ ತರಹದ ಸನ್ಮಾನಗಳನ್ನು ವೇದಿಕೆಯಲ್ಲಿ ನಿಷೇಧಿಲಾಗಿದೆ. ಹಾಗಾಗಿ ಯಾರೂ ಕೂಡ ಹಾರ ತುರಾಯಿಗಳನ್ನು ತರಬಾರದು ಎಂದು ಮನವಿ ಮಾಡಿಕೊಂಡರು.
ವಿಶೇಷವಾಗಿ ಸಾಂಸ್ಕೃತಿಕ ವೇದಿಕೆಯಲ್ಲಿ ರಾಷ್ಟ ಗೀತೆ, ನಾಡಗೀತೆ, ಭಾವಗೀತೆಗಳನ್ನು ಸೇರಿದಂತೆ ಜನಪದ ಗ್ರಾಮೀಣ ಸೊಗಡಿನ 30 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ರೈಲ್ವೆ, ಸೊರಬ-ಆನವಟ್ಟಿ ಚತುಷ್ಪಥ ರಸ್ತೆ, ದಂಡಾವತಿ ನೀರಾವರಿ, ಆಸ್ಪತ್ರೆ, ಹಾಸ್ಟೆಲ್’ಗಳು, ಕೆಪಿಎಸ್ ಶಾಲೆ ಕಟ್ಟಡಗಳು, ಸಭಾಭವನ ಸೇರಿದಂತೆ ಹಲವು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಯುವಾ ಮೋರ್ಚಾ ಅಧ್ಯಕ್ಷ ಅಭಿಷೇಕ್ ಬೆನ್ನೂರು, ಮುಖಂಡರಾದ ಚನ್ನಬಸಪ್ಪ, ಮಲ್ಲಿಕಾರ್ಜುನ್ ವೃತ್ತಿಕೊಪ್ಪ, ಮಹೇಶ್ ಮೂಡಿ, ಶಿವನಗೌಡ ದ್ವಾರಹಳ್ಳಿ, ಶಿವಕುಮಾರ್ ಕಡಸೂರು, ಕೆ. ಕೆರಿಯಪ್ಪ, ನಜೀರ್ ಸಾಬ್ ಸೊರಬ ಮತ್ತಿತರರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post