ಕಲ್ಪ ಮೀಡಿಯಾ ಹೌಸ್ | ಸೊರಬ |
ಅರಣ್ಯ ಪ್ರದೇಶ ಮತ್ತು ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳು ಸೇರದಿರುವಂತೆ ನಿಗಾ ವಹಿಸುವ ಐಚ್ಛಿಕ ಸಂಕಲ್ಪ ನಿಮ್ಮದಾದರೆ ನೀವು ಪರಿಸರಕ್ಕೆ ನೀಡುವ ಅತ್ತ್ಯುತ್ತಮ ಕೊಡುಗೆ ಆಗುತ್ತದೆ ಎಂದು ಪರಿಸರ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಪರ್ಯಾವರಣ ಗತಿ ವಿಧಿ ಜಿಲ್ಲಾ ಘಟಕ, ಕದಂಬ ಯುವ ಸಂಘ ಹಾಗೂ ರಾಸೇಯೋ ಘಟಕ ಸರ್ಕಾರಿ ಜೂನಿಯರ್ ಕಾಲೇಜು ಆಶ್ರಯದಲ್ಲಿ ನಡೆದ ಮಳೆ ಕೊಯ್ಲು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
ಭೂಮಿಯಲ್ಲಿ ನೀರು ಇಂಗಿಸುವ ಅತಿ ಸುಲಭದ ವಿಧಾನವೆ ಮರಗಿಡಗಳನ್ನು ಬೆಳೆಸುವುದು, ಕಾಡು ನಾಶ ಕೇವಲ ಮರಗಳನ್ನಷ್ಟೆ ಕಳೆದುಕೊಳ್ಳುವುದಿಲ್ಲ ಅದರ ಜೊತೆಗೆ ಪ್ರಾದೇಶಿಕ ಸಂಸ್ಕೃತಿಯ ನಾಶವೂ ಆಗುತ್ತದೆ. ಅತಿಯಾದ ಪ್ಲಾಸ್ಟಿಕ್ ಬಳಕೆ, ರಾಸಾಯನಿಕ ಬಳಕೆ ನೀರಿನ ಕ್ಷೀಣತೆಗೆ, ಜೀವಿ, ಸಸ್ಯ ಅಸಮತೋಲನಕ್ಕೆ ಕಾರಣವಾಗಿದೆ. ಪರಿಸರ ಕಾಳಜಿ, ಪ್ರಜ್ಞೆ ಮನೆಯಿಂದ, ನನ್ನಿಂದಲೆ ಎಂಬ ಸಂಕಲ್ಪವಾಗಲಿ ಎಂದರು.
Also read: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸೊರಬ ಪುರಸಭೆ ಕೇಸ್ ವರ್ಕರ್ ಚಂದ್ರಕಲಾ
ಕಾಲೇಜು ಪ್ರಾಂಶುಪಾಲ ಎಂ.ಸುರೇಶ್ ಮಾತನಾಡಿ, ಕೇಕ್, ಚಾಕಲೇಟ್ ಹಂಚಿ ಹುಟ್ಟು ಹಬ್ಬ ಆಚರಿಸುವುದಕ್ಕೆ ಕಾಲೇಜಿನಲ್ಲಿ ಅವಕಾಶವಿಲ್ಲ, ಬದಲಿಗೆ ಈ ಆಚರಣೆ ಗಿಡನೆಡುವ ಮೂಲಕ ವಾದರೆ ಆಡಳಿತ ಹೃತ್ಪೂರ್ವಕ ಸ್ವಾಗತ ಕೋರುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ಉಮೇಶ್ ಭದ್ರಾಪುರ, ನೆಹರು ಯುವ ಕೇಂದ್ರ ಸಾಗರದ ಗಿರೀಶ್, ವೆಂಕಟೇಶ್, ಉಪನ್ಯಾಸಕ ಗೇಬೂಷಣ, ಚಿದಾನಂದ ಗೌಡ್ರು, ಬಸವರಾಜ, ಪ್ರಜ್ವಲ ಕುಮಾರ, ರೇವಣಪ್ಪ ಮತ್ತು ಧರ್ಮಪ್ಪ ಇದ್ದರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















