ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ದಂಡಾವತಿ ಬ್ಲಾಕ್‍ನಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಹಿಂಭಾಗದ ಉದ್ಯಾನದಲ್ಲಿ ಜಯಂತಿ ಗ್ರಾಮದ ನಿವಾಸಿ ಸಂದ್ಯಾ ಮತ್ತು ಬಸವರಾಜ್ ದಂಪತಿ ತಮ್ಮ ಎರಡನೇ ಮಗುವಿನ ನಾಮಕರಣ ಹಿನ್ನೆಲೆಯಲ್ಲಿ ಸಸಿ ನೆಡುವ ಮೂಲಕ ಪರಿಸರ ಪ್ರೇಮ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬಸವರಾಜ್ ಅವರು, ಪರಿಸರ ಉಳಿದರೆ ಮಾತ್ರ ಮನುಕುಲದ ಉಳಿವು ಸಾಧ್ಯವಾಗುತ್ತದೆ. ಮರಗಳು ಪರಿಸರಕ್ಕೆ ಪೂರಕವಾಗಿ ಹಣ್ಣು-ಆಹಾರ ಒದಗಿಸುತ್ತಾ, ಪಕ್ಷಿ-ಪ್ರಾಣಿ ಸಂಕುಲಕ್ಕೆ ನೆರವನ್ನು ನೀಡುತ್ತಿರುತ್ತವೆ. ಅಂತೆಯೇ ತಮ್ಮ ಪುತ್ರ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಸಮಾಜಕ್ಕೆ ಮಾದರಿಯಾಗಬೇಕು ಎನ್ನುವ ಉದ್ದೇಶದಿಂದ ಸಸಿಗಳನ್ನು ನೆಡಲಾಗುತ್ತಿದೆ. ಇದಕ್ಕೆ ಪತ್ನಿ ಸಂದ್ಯಾ ಅವರೇ ಸ್ಫೂರ್ತಿಯಾಗಿದ್ದಾರೆ ಮತ್ತು ನೆಮ್ಮದಿ ಗ್ರುಪ್ ಆಫ್ ಸರ್ವಿಸಸ್ ನವರು, ಪರಿಸರಾಸಕ್ತರು ಕೈ ಜೋಡಿಸಿದರು ಎಂದರು.

Also read: ಮಾರ್ಚ್ ಅಂತ್ಯದೊಳಗೆ ಜಲ ಜೀವನ ಮಿಷನ್ ಕಾಮಗಾರಿ ಪೂರ್ಣಗೊಳಿಸಿ
ನೆಮ್ಮದಿ ಗ್ರುಪ್ ಆಫ್ ಸರ್ವಿಸಸ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೆಮ್ಮದಿ ಸುಬ್ಬು ಮಾತನಾಡಿ, ಪರಿಸರಕ್ಕೆ ಪೂರಕವಾದ ಕೊಡುಗೆಗಳನ್ನು ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅಂತೆಯೇ ಈ ಒಂದು ನಾಮಕರಣ ಶಾಸ್ತ್ರವನ್ನು ಸಸಿ ನೆಡುವ ಮೂಲಕ ಚಾಲನೆ ನೀಡುವ ಜೊತೆಗೆ ನೆಮ್ಮದಿ ಇವೆಂಟ್ಸ್‍ಗೂ ಸಹ ಆರಂಭಗೊಳಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬಿ.ಡಿ. ನಾಗರಾಜ, ಸರೋಜಮ್ಮ, ಶಾಂತಮ್ಮ, ಶಿಲ್ಪಾ ರವಿಶಂಕರ್, ಸವಿತಾ ನಾಗರಾಜ್, ಸುಜಾತ ಅಣ್ಣಪ್ಪ, ನಾಗರತ್ನಾ ದಾಮೋಧರ, ನಿರಂಜನ್, ಕವಿತಾ, ಹಿರಿಯಪ್ಪ, ಉಷಾ, ರೂಪಾ ಸತೀಶ್, ನೆಮ್ಮದಿ ಗ್ರುಪ್ ಆಫ್ ಸರ್ವಿಸಸ್ ಮುಖ್ಯಸ್ಥೆ ಅನಿತಾ ಸುಬ್ಬು, ಶ್ರೀರಕ್ಷಾ ಸುಬ್ಬು, ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ, ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಮಧುಕೇಶ್ವರ, ನಾಗರಾಜ ಹಿರೇಶಕುನ ಸೇರಿದಂತೆ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post