ಕಲ್ಪ ಮೀಡಿಯಾ ಹೌಸ್
ಸೊರಬ: ತಾಲ್ಲೂಕು ಜೀವವೈವಿಧ್ಯ ಸಮಿತಿಯ ಚಟುವಟಿಕೆಗಳ ಕ್ರಿಯಾಶೀಲತೆ ಕುರಿತಂತೆ ಅಧಿಕಾರಿಗಳ ಮಟ್ಟದ ಸಭೆ ಪಟ್ಟಣದ ತಾಪಂ ಸಭಾಂಗಣದಲ್ಲಿ ಜರುಗಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತಹೆಗಡೆ ಅಶೀಸರ ನೇತೃತ್ವದಲ್ಲಿ ಸಭೆ ಜರುಗಿದ್ದು, ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸಭೆ ಅವಶ್ಯ ಕಾಲಕ್ಕೆ ನಡೆಸುವುದು, ಸಾಮರ್ಥ್ಯ ವರ್ಧನೆ ಮತ್ತು ಜಾಗೃತಿ ಕಾರ್ಯ ಚಟುವಟಿಕೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದು, ಜೀವವೈವಿಧ್ಯ ದಾಖಲಾತಿ ವರದಿ ಬಿಡುಗಡೆ, ಕೆರೆ ಅಧ್ಯಯನ, ರಕ್ಷಣೆ ಕುರಿತಂತೆ ಕಾರ್ಯ ಚಟುವಟಿಕೆ, ಉಪನ್ಯಾಸ ಏರ್ಪಡಿಸುವುದು. ವಿದ್ಯಾರ್ಥಿಗಳಿಗೆ ಸಸ್ಯ ವೈವಿಧ್ಯ ಗುರುತಿಸುವ ಸ್ಪರ್ಧೆ, ತಜ್ಞರ ಸಲಹಾ ಸಮಿತಿ ರಚನೆ, ಪಾರಂಪರಿಕ ತಾಣ ಗುರುತಿಸುವುದು, ಸಾಧಕರನ್ನ ಸನ್ಮಾನಿಸುವುದು, ಬೀಜ, ತಳಿ ವೈವಿಧ್ಯ ಸಂರಕ್ಷಣೆ, ಪವಿತ್ರವನ, ಔಷಧೀಯ ವನ ನಿರ್ಮಾಣಕ್ಕೆ ಕಾರ್ಯ ಯೋಜನೆ ರೂಪಿಸುವುದು, ಸ್ಥಳೀಯ ಆಧ್ಯತೆಯಂತೆ ಜೀವವೈವಿಧ್ಯ ನಿರ್ವಹಣೆ ರಕ್ಷಣೆ, ನಾಟಿ ವೈದ್ಯರ ಸಮಾವೇಶ, ಜೀವವೈವಿಧ್ಯ ಕಾಯಿದೆ ಬಗ್ಗೆ ವಕೀಲರೊಂದಿಗೆ ಮಾತನಾಡಿ ಸಭೆ ನಡೆಸುವುದು, ಮುಂತಾದ ಕಾರ್ಯಚಟುವಟಿಕೆಗಳ ಕುರಿತು ಸೂಚಿಸಿದರು.
ತಾಪಂ ಕಾರ್ಯ ನಿರ್ವಹಣಾಧಿಕಾರಿ ಕುಮಾರ್, ಸಾಮಾಜಿಕ ಅರಣ್ಯಾಧಿಕಾರಿ ಸಂಜಯ್, ಮಂಜುನಾಥ್, ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆ ಅಧಿಕಾರಿಗಳು, ರಾಜ್ಯ ಜೀವವೈವಿಧ್ಯ ಮಂಡಳಿ ಸದಸ್ಯ ಕೆ.ವೆಂಕಟೇಶ್, ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ತಾಪಂ ಅಧಿಕಾರಿ ಪರಶುರಾಮ್ ಇದ್ದರು.
ಚಂದನವನಕ್ಕೆ ಭೇಟಿ:
ತಾಲ್ಲೂಕು ಉಳವಿ ಹೋಬಳಿ ಮೂಡುಗೋಡು ಚಂದನವನದಲ್ಲಿ ವೃಕ್ಷಾರೋಪಣ ನೆರವೇರಿಸಿದ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತಹೆಗಡೆ, ವನದ ರಕ್ಷಣೆಗೆ ಪೂರಕವಾಗಿ ಅಗತ್ಯವಿರುವ ಸೌಲಭ್ಯಗಳ ಕುರಿತು ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.
ಮೂಡುಗೋಡು, ಹೊಸಬಾಳೆ, ಕೋಣನಕಟ್ಟೆ ಗ್ರಾಮಗಳ ಅರಣ್ಯದಲ್ಲಿ ಅಪೂರ್ವ ವೈವಿಧ್ಯ ಸಸ್ಯಸಂಕುಲವಿದ್ದು ಅಗತ್ಯವಿರುವ ಸಿಪಿಟಿಗೆ ಸೂಚಿಸಲಾಯಿತು. ಈ ವೇಳೆ ಹೊಸಬಾಳೆ ಗ್ರಾಪಂ ಅಧ್ಯಕ್ಷ ಸತ್ಯನಾರಾಯಣ, ಗ್ರಾಪಂ ಜೀವವೈವಿಧ್ಯ ಸಮಿತಿ ಸದಸ್ಯ ಪ್ರಸಾದ್, ಅರಣ್ಯಾಧಿಕಾರಿ ಪರಶುರಾಮ್, ಗ್ರಾಮ ಅರಣ್ಯ ಸಮಿತಿಯ ಕೆ.ಟಿ.ಶಿವಾನಂದ, ಕಂಚಿಶಿವರಾಂ ಮುಂತಾದವರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post