ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನಲ್ಲಿ ಕೆಲ ಕಾಂಗ್ರೆಸ್ #Congress ಮುಖಂಡರ ದಬ್ಬಾಳಿಕೆ ಹೆಚ್ಚಾಗಿದ್ದು, ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ #MadhuBangarappa ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಪ್ರಮುಖರು ಸಿಡಿದೆದಿದ್ದಾರೆ.
ಈ ಕುರಿತಂತೆ ಮಾತನಾಡಿದ ಸಮಿತಿ ಪ್ರಮುಖರು, ಈ ವಿಚಾರದಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿರುವುದರಿಂದ ಅಕ್ರಮ ಕೆಲಸಗಳು ಅವ್ಯಾಹತವಾಗಿ ನಡೆದಿದ್ದು ಕೆಲ ಮುಖಂಡರು ಸಂಬಂಧಿಗಳಿಗೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ತಹಶಿಲ್ದಾರರ ನಿಷ್ಕ್ರಿಯ ಕಾರ್ಯವೈಖರಿಯಿಂದ ಕಂದಾಯ ಇಲಾಖೆ ಕಾರ್ಯಗಳೆಲ್ಲವೂ ನಿಷ್ಕ್ರಿಯಗೊಂಡಿದ್ದು ಸಾಮಾನ್ಯ ಜನರಿಗೆ ತೀವ್ರ ತೊಂದರೆ ಆಗಿದೆ. ಕೂಡಲೇ ತಹಶಿಲ್ದಾರರನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಮುಂಬರುವ ಚುನಾವಣೆಗೆ ನಾವು ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಬಹಿಷ್ಕಾರ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.

(ವರದಿ: ಮಧುರಾಮ್, ಸೊರಬ)









Discussion about this post