ಕಲ್ಪ ಮೀಡಿಯಾ ಹೌಸ್ | ಸೊರಬ |
ಪಂಚರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ Five state assembly election ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‍ಗಡ್ ರಾಜ್ಯಗಳಲ್ಲಿ BJP victory in Rajasthan, Madhya Pradesh, Chhattisgarh ಬಿಜೆಪಿ ಪ್ರಪಂಡ ಬಹುಮತ ಪಡೆದು ಗೆಲುವು ಸಾಧಿಸುತ್ತಿದ್ದಂತೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಪುರಸಭೆ ಆವರಣದಲ್ಲಿ ಜಮಾಯಿಸಿ ಪ್ರಧಾನಿ ನರೇಂದ್ರ ಮೋದಿ, PMNarendraModi ರಾಜ್ಯಾಧ್ಯಕ್ಷ ವಿಜಯೇಂದ್ರ, Vijayendra ಪರ ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಿದರು.
Also read: ಬಡವರ ಪರ ಧ್ವನಿ ಎತ್ತಿ ಸರ್ಕಾರದ ಯೋಜನೆಗಳನ್ನು ಸಕಾರಗೊಳಿಸಿ: ಸಿಎಂಗೆ ಈಶ್ವರಪ್ಪ ಕಿವಿಮಾತು
ತಾಲೂಕು ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮಾತನಾಡಿ, ಪಂಚ ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯನ್ನು ವಿರೋಧ ಪಕ್ಷಗಳು ಸೆಮಿಫೈನಲ್ ಎಂದೇ ಬಿಂಬಿಸಿದ್ದವು. ಐದು ರಾಜ್ಯಗಳಲ್ಲಿ ಬಿಜೆಪಿ ಸೋಲುತ್ತದೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಆದರೆ, ಈಗ ಫಲಿತಾಂಶ ಪ್ರಕಟವಾಗಿದ್ದು, ನಾಲ್ಕು ರಾಜ್ಯಗಳ ಪೈಕಿ ತೆಲಂಗಾಣ ಹೊರತು ಪಡಿಸಿ ಇನ್ನು ಮೂರು ರಾಜ್ಯಗಳಲ್ಲಿ ಬಿಜೆಪಿ ಪ್ರಚಂಡ ಬಹುಮತವನ್ನು ಗಳಿಸಿ, ಅಧಿಕಾರವನ್ನು ಸ್ಥಾಪಿಸಲು ಮುಂದಾಗಿದೆ. ದೇಶಕ್ಕೆ ಮತ್ತೇ ನರೇಂದ್ರ ಮೋದಿ ಅವರು ಬೇಕು ಎಂದು ಆ ರಾಜ್ಯಗಳ ಮತದಾರ ಪ್ರಭುಗಳು ತೀರ್ಪು ನೀಡಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಎಂ ಡಿ ಉಮೇಶ್, ಮಧುರಾಯ್ ಜಿ ಶೇಟ್, ಪ್ರಭು ಮೇಸ್ತ್ರಿ, ನಟರಾಜ್ ಉಪ್ಪಿನ್, ಜಯಲಕ್ಷ್ಮಿ, ಮುಖಂಡರಾದ ಶಿವಯೋಗಿ, ಗುರುಮೂರ್ತಿ ಹಿರೇಶಕುನ, ಯಶೋಧರ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)











Discussion about this post