ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳದಿದ್ದರೆ ನಮಗೆ ದೊರೆತ ಸ್ವಾತಂತ್ರ ವ್ಯರ್ಥವಾಗುತ್ತದೆ. ಈ ದಿಸೆಯಲ್ಲಿ ಶಿಕ್ಷಣದ ಮಹತ್ವ ಪ್ರಮುಖ ಎಂದು ಜೀವವೈವಿಧ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ತಾಲ್ಲೂಕು ಮುಟಗುಪ್ಪೆ ಗ್ರಾಪಂ ವ್ಯಾಪ್ತಿಯ ಯಲಸಿ ಗ್ರಾಮದ ಅಮೃತ ಸರೋವರದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ ಸ್ವೇಚ್ಛೆಗಾಗಿ ಅಲ್ಲ, ಈ ಭೂಮಿಯಲ್ಲಿನ ಸಮಸ್ತ ಜೀವರಾಶಿಗೂ ಬದುಕುವ ಹಕ್ಕಿದೆ. ಹಕ್ಕಿನಷ್ಟೆ ಮನುಷ್ಯನ ಕರ್ತವ್ಯಗಳು ಬಹುಮುಖ್ಯವಾಗಿರುವುದರಿಂದ ಪ್ರಕೃತಿಯ ಜೊತೆಗೆ ಅನುಸರಿಸಿಕೊಂಡು ಜೀವವೈವಿಧ್ಯದ ಕೊಂಡಿ ಕಳಚದಂತೆ ನೋಡಿಕೊಳ್ಳಬೇಕು ಎಂದರು.
ಗ್ರಾಮಾಧ್ಯಕ್ಷ ಬಿ. ಲೋಕೇಶ್ ಮಾತನಾಡಿ, ಅಮೃತಸರೋವರದ ಮುಂದುವರೆದ ಕೆಲಸ ಶೀಘ್ರವಾಗಿ ಆರಂಭವಾಗಲಿ ಎಂದರು.
ಮಾಜಿ ಗ್ರಾಮಾಧ್ಯಕ್ಷ ಕೆ.ಧರ್ಮಪ್ಪ, ಅಮೃತಸರೋವರದ ನಿರ್ಮಾಣದ ಮೂಲಕ ಗ್ರಾಮದ ರೈತರಿಗೆ ಸ್ವಾತಂತ್ರೋತ್ಸವದ ಸದಾವಕಾಶ ಒದಗಿಸಿಕೊಟ್ಟಿದ್ದಕ್ಕೆ ಗ್ರಾಮಸ್ಥರ ಪರವಾಗಿ ಶ್ಲಾಘಿಸಿದರು.
ಗ್ರಾಮದ ಹಿರಿಯ ವಿ. ಸಿದ್ದಪ್ಪ ಮಾತನಾಡಿ, ಸರೋವರದ ಸುತ್ತ ಬೇಲಿಯ ಆವರಣವಾಗಲಿ ಎಂದರು.
ಗ್ರಾಪಂ ಅಧಿಕಾರಿ ಸುಧಾಕರ, ಸಿಬ್ಬಂದಿ, ಗ್ರಾಮ ಅಧ್ಯಕ್ಷ ಬಿ. ಲೋಕೇಶ್, ಕೆ. ಧರ್ಮಪ್ಪ, ವಿ. ಸಿದ್ದಪ್ಪ, ಬಿ. ಬುಕ್ಕೇಶ್, ಕೃಷ್ಣಪ್ಪ, ಅಜ್ಜಪ್ಪ, ಬೊಮ್ಮಪ್ಪ, ವಿ.ಬಸವರಾಜ್, ವಿಜಯ ಪೂಜಾರಿ, ಬಿ.ಸಿದ್ದಪ್ಪ ಹಾಗೂ ಗ್ರಾಮಸ್ಥರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















