ಕಲ್ಪ ಮೀಡಿಯಾ ಹೌಸ್ | ಸೊರಬ |
ಮಲೆನಾಡ ಕೆರೆ, ಕಾನು ಸಮಾವೇಶ ತಾಲ್ಲೂಕು ಐತಿಹಾಸಿಕ ತಾಣ ಉದ್ರಿ ಗ್ರಾಮದಲ್ಲಿ ನವೆಂಬರ್ 3ರಂದು ಜರುಗಲಿದೆ ಎಂದು ಅನಂತಹೆಗಡೆ ಅಶಿಸರ Ananthahegde Ashisara ತಿಳಿಸಿದ್ದಾರೆ.
ರಾಜ್ಯದ ವಿಜ್ಞಾನಿಗಳು, ವಿಶೇಷ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಜಿಲ್ಲೆಯ ಪರಿಸರ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ.Also read: ರಾಜ್ಯೋತ್ಸವ, ದೀಪಾವಳಿ ವಿಶೇಷ ನ.3ರಿಂದ ಆಭರಣಗಳ ವೈಶಿಷ್ಟ್ಯ “ದಿ ಜ್ಯುವೆಲ್ಲರಿ ಶೋ” ಪ್ರಾರಂಭ
ಜೀವವೈವಿಧ್ಯ ಜಾಗೃತಿ, ಜಲಮೂಲಗಳ, ಜಲಾನಯನಗಳ ಕಾನುಗಳ ರಕ್ಷಣೆಗೆ ಪಾರಂಪರಿಕ ಪದ್ಧತಿಯನ್ನು ರಕ್ಷಿಸುವ ಪ್ರಯತ್ನಗಳು, ಯಶೋಗಾಥೆ ಮಂಡನೆ, ಕೆರೆ ನಾಶ, ಕಾನು ನಾಶ ತಡೆಯಲು ಸಂಘಟಿತ ಜಂಟಿ ಪ್ರಯತ್ನಗಳು, ಸರ್ಕಾರ, ಸಂಸ್ಥೆಗಳ ಪ್ರಯೋಗಗಳ ಮಾಹಿತಿ ವಿನಿಮಯ, ಕೆರೆ ಕಾನು ಉಳಿಸಿ ಅಭಿಯಾನ ಬಲಪಡಿಸುವ ಉದ್ಧೇಶ ಈ ಸಮಾವೇಶದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ವರದಿ: ಮಧುರಾಮ್, ಸೊರಬ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















