ಕಲ್ಪ ಮೀಡಿಯಾ ಹೌಸ್ | |
110/11 ಕೆವಿ ಸೊರಬ ವಿ.ವಿ ಕೇಂದ್ರದಿಂದ ಹೊಸ ಲಿಂಕ್: ಲೈನ್ ಮಾರ್ಗಗಳನ್ನು ನಿರ್ಮಿಸುವ ಕಾಮಗಾರಿ ನಡೆಸಲು ಉದ್ದೇಶಿಸಿರುವುದರಿಂದ ಜ.14ರಂದು 11/11 ಕೆವಿ ವಿ.ವಿ ಕೇಂದ್ರ ಸೊರಬದಿಂದ ವಿದ್ಯುತ್ ಸರಬರಾಜಾಗುವ ಎಫ್-2, ಸಾರೆಕೊಪ್ಪ, ಎಫ್-1 ಬಳ್ಳಿಬೈಲು, ಎಫ್-21 ಸೊರಬ ಪಟ್ಟಣ, ಎಫ್-1 ಕುಮ್ಮೂರು, ಎಫ್-1 ದೇವತಿಕೊಪ್ಪ, ಎಫ್-9 ಬೀಳಾಗಿ, ಎಫ್-11 ಮಂಚಿ, ಎಫ್-15 ಕಂಬಿ, ಎಫ್-16 ಕಡಸೂರು, ಎಫ್-17 ಯಲವಳ್ಳಿ, ಎಫ್-21 ಕರಡಿಗೆರೆ, ಎಫ್-25 ನಡಹಳ್ಳಿ ಫೀಡರ್‌ಗಳ ವ್ಯಾಪ್ತಿಗೊಳಪಡುವ ಸೊರಬ ಪುರಸಭೆ ಹಾಗೂ ಎಲ್ಲಾ ಗ್ರಾಮಗಳಿಗೆ ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತು ಎಂದಿನಂತೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post