ಕಲ್ಪ ಮೀಡಿಯಾ ಹೌಸ್ | ಸೊರಬ |
ಬಿಜೆಪಿ ಯುವ ಮೋರ್ಚಾ ವತಿಯಿಂದ ಆಪರೇಷನ್ ಸಿಂಧೂರ #Operation Sindoor ಮತ್ತು ಆಪರೇಷನ್ ಮಹಾದೇವ #Operation Mahadeva ಯಶಸ್ವಿಗಾಗಿ ವೀರಯೋಧರಿಗೆ ನಮನ ಹಾಗೂ 78ನೇ ಸ್ವಾತಂತ್ರ್ಯ ದಿನದ #Independence Day ಅಂಗವಾಗಿ ತಿರಂಗ ಯಾತ್ರೆ ಬೈಕ್ ರ್‍ಯಾಲಿ ಪಟ್ಟಣದಲ್ಲಿ ಮಂಗಳವಾರ ನಡೆಯಿತು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆರಂಭವಾದ ಬೈಕ್ ರ್‍ಯಾಲಿ ಮುಖ್ಯರಸ್ತೆ ಮಾರ್ಗವಾಗಿ ಪುರಸಭೆ ಮುಂಭಾಗದ ವೃತ್ತ, ಕೆಇಬಿ ಕಾಲೋನಿ, ನಂತರ ಪುನಃ ಶ್ರೀ ರಂಗನಾಥ ದೇವಸ್ಥಾನದವರೆಗೆ ಸಾಗಿತು.

ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮಾವಿನಬಳ್ಳಿಕೊಪ್ಪ ಬೈಕ್ವ ರ್ಯಾಲಿ ನೇತೃತ್ವವಹಿಸಿ ಮಾತನಾದ ಅವರು, ದೇಶ ಭಕ್ತಿಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಮತ್ತು ಸಮಸ್ತ ಭಾರತೀಯರು ಒಂದು ಎಂದು ಜಗತ್ತಿಗೆ ತಿಳಿಸಲು ಪ್ರತಿಯೊಬ್ಬರು ಮನೆಗಳ ಮೇಲೆ ತಿರಂಗವನ್ನು ಹಾರಿಸಬೇಕಿದೆ. ದೇಶ ಭಕ್ತಿಯ ಮುಖೇನ ಸ್ವಾತಂತ್ರ್ಯ ಕಾಪಾಡುವುದು ಮೊದಲ ಆಶಯವಾಗಿದೆ. ಆಪರೇಶನ್ ಸಿಂಧೂರ ಮತ್ತು ಆಪರೇಶನ್ ಮಹಾದೇವ ಯಶಸ್ವಿಗೆ ಕಾರಣರಾದ ದೇಶದ ಸೈನಿಕರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆ.13ರಿಂದ 15ರವರೆಗೆ ದೇಶದ ಎಲ್ಲಡೆ ಹರ್ ಘರ್ ತಿರಂಗ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post