ಕಲ್ಪ ಮೀಡಿಯಾ ಹೌಸ್ | ಸೊರಬ |
ಮಕ್ಕಳು ಬಿಳಿ ಹಾಳೆ ಇದ್ದಹಾಗೆ, ನಿಮ್ಮ ಮಕ್ಕಳು ನಿಮ್ಮ ಭವಿಷ್ಯದ ಸಂಕೇತಗಳು, ಅವರು ನಿಮ್ಮ ಕನಸಿನ ಕೂಸುಗಳು. ಅವರನ್ನು ಸಂಸ್ಕಾರಯುತವಾಗಿ ಬೆಳೆಸಿ, ಸಮಾಜಕ್ಕೆ ಪೂರಕವಾಗಿ ಬೆಳೆಸಿ ಎಂದು ಮೆಸ್ಕಾಂ ನ ಸಹಾಯಕ ಅಭಿಯಂತರ ಉಮೇಶ್ ಹೆಚ್.ಜೆ. ಹೇಳಿದರು.
ಪಟ್ಟಣದ ಖ್ಯಾತ ಅನ್ಮೋಲ್ ಸೇವಾ ಟ್ರಸ್ಟ್ನ ಆಶಾಕಿರಣ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ ಕಾರ್ಯ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಶಿಕ್ಷಣದ ಅವಧಿಯಲ್ಲಿ ಪೋಷಕರ ಕೆಲವು ತ್ಯಾಗ ಅವಶ್ಯಕ, ನೀವು ಮೊಬೈಲ್, ಟಿವಿ ವೀಕ್ಷಣೆ ಕಡಿಮೆ ಮಾಡಿದರೆ ಮಕ್ಕಳು ಕೂಡ ಅದರತ್ತ ಆಕರ್ಷಿತರಾಗುವುದಿಲ್ಲ ಎಂಬುದನ್ನ ಅರಿತುಕೊಂಡು ಅವರ ಮನೊವಿಕಾಸಕ್ಕೆ ಮುಂದಾಗಿ ಎಂದರು.
ನಿಮ್ಮ ಕನಸನ್ನ ನಿಮ್ಮ ಮಕ್ಕಳು ನೆರವೆರಿಸುವಂತೆ ಬೆಳೆಸಿ, ಅವರಿಗೆ ಯಾವುದು ಸರಿ ತಪ್ಪು ತಿಳಿಸಿಕೊಡಿ. ನೀಡುವ ಶಿಕ್ಷೆ ಮತ್ತೆ ತಾನು ತಪ್ಪು ಮಾಡಬಾರದು ಎಂಬಂತಿರಬೇಕೆ ಹೊರತು ಘಾಸಿಗೊಳ್ಳುವಂತಲ್ಲ ಎಂದರು.
ಸಂಸ್ಥೆಯ ಅಧ್ಯಕ್ಷ ಮಾಜಿ ಯೋಧ ಸಂಗಪ್ಪ, ಮಾತನಾಡಿ, ಗುಣಾತ್ಮಕ ಶಿಕ್ಷಣಕ್ಕೆ ಶಿಕ್ಷಕರಷ್ಟೆ ಅಲ್ಲ ಪೋಷಕರ ಶ್ರಮವೂ ಅವಶ್ಯ, ಮನೆಯಿಂದಲೇ ಅವರಿಗೆ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಬೇಕು. ಮಾನವೀಕ ಮೌಲ್ಯದ ಗುಣಗಳನ್ನು ಪರಿಚಯಿಸಬೇಕು ಸಂಸ್ಕಾರಯುತ ಶಿಕ್ಷಣ ಮಕ್ಕಳ ಮನೋದೈಹಿಕ ದೃಢತೆಗೆ ನೆರವಾಗುತ್ತದೆ. ಗುಣಾತ್ಮಕ ವಿವೇಚನೆಗಳು ಅವರಿಗೆ ನಿಮ್ಮಿಂದಲೆ ದೊರಕುವಂತಾಗಬೇಕು ಎಂದರು.
ವರ್ಣಮಯ ವೇದಿಕೆಯಲ್ಲಿ ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಹಾಡುಹಸೆ,ಗೀತಗಾಯನ, ನೃತ್ಯ, ಏಕಪಾತ್ರಾಭಿನಯ ಮೊದಲಾದ ಸುಪ್ತ ಚಟುವಟಿಕೆಗಳು ಮಕ್ಕಳಿಂದ ಅನಾವರಣಗೊಂಡವು.
ಈ ಸಂಧರ್ಭದಲ್ಲಿ ಅತಿಥಿಗಳಾದ ಶಿವಕುಮಾರ ಸ್ವಾಮಿ ಹೆಚ್.ಎಂ, ಪೋಷಕ ಪ್ರತಿನಿಧಿ ರಾಜು ಹಿರಿಯಾವಲಿ, ಈ. ಸಿ. ಒ ಸಂಜೀವಕುಮಾರ್, ಸಿ, ಆರ್, ಪಿ ಹರೀಶ್ ಡಿ, ಮುಖ್ಯೋಪಾದ್ಯಾಯರಾದ ಶೋಭಾ ಯು. ಸಂಸ್ಥೆಯ ಶಿಕ್ಷಕರಾದ ಹೇಮಾವತಿ, ಸುಮಲತಾ, ಸಂಪ್ರತಾ, ಸುಪ್ರಜಾ, ರಾಧಿಕಾ, ಕಾವ್ಯ, ಚಂದ್ರಶೇಖರ್, ಪ್ರವೀಣ್ ಹಾಗೂ ಪೋಷಕರು ಇದ್ದರು.
ವರದಿ: ಮಧು ರಾಮ್ ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















