ಸೊರಬ: ಪಟ್ಟಣದ ದಂಡಾವತಿ ನದಿಯ ಪಕ್ಕದಲ್ಲಿರುವ ನದಿ ಕಟ್ಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯ ಪ್ರಯುಕ್ತ ಜೆಸಿಐ ಸೊರಬ ಸಿಂಧೂರ ಮಹಿಳಾ ಘಟಕದಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭಜನಾ ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಪಾನಕ ಮತ್ತು ಕೋಸಂಬರಿ ವಿತರಣಾ ಸೇವೆಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಜೆಸಿಐ ಸೊರಬ ಸಿಂಧೂರ ಘಟಕದ ಅಧ್ಯಕ್ಷರಾದ ಪೂಜಾ ಪ್ರಶಾಂತ್ ದೊಡ್ಡಮನೆ, ಕಾರ್ಯದರ್ಶಿ ಉಷಾ ಸಿದ್ಧಲಿಂಗ ಸ್ವಾಮಿ, ದೇವಸ್ಥಾನದ ಅರ್ಚಕರಾದ ಶ್ರೀನಾಥ್ ಮೆಹೆಂದಳೆ, ಜೇಸಿಐನ ವಲಯ ಅಧಿಕಾರಿಯಾದ ಪ್ರಶಾಂತ್ ದೊಡ್ಡಮನೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಲೇಶ್ ನವುಲೆ, ಸಂತೋಷ್, ಶ್ರೀಕಾಂತ್ ಶೇಟ್, ಮಂಜುನಾಥ್, ಪ್ರಕಾಶ್, ಆರತಿ ಮಹಾಂತೇಶ್, ಜಯಮಾಲಾ ಅಣ್ಣಾಜಿ ಗೌಡ, ಗೀತಾ ನಿಂಗಪ್ಪ, ಮಂಜುಳಾ ಸುರೇಶ್, ವೀಣಾ ವಿನಯ್ ಕುಮಾರ್, ಶ್ಯಾಮಲಾ ನಾವುಡ, ಜೂನಿಯರ್ ಜೇಸಿ ಅಧ್ಯಕ್ಷೆ ಇಂಚರ ಮುಂತಾದವರು ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)
Discussion about this post