ಕಲ್ಪ ಮೀಡಿಯಾ ಹೌಸ್ | ಸೊರಬ |
ಗುರು ಹಿರಿಯರನ್ನು ಗೌರವಿಸುವುದು, ಸ್ಮರಿಸುವುದು, ಸಮ್ಮಾನಿಸುವುದು ಭಾರತೀಯ ಸಂಸ್ಕೃತಿ. ನಮ್ಮ ಜೀವನದ ಅವಧಿಯಲ್ಲಿ ದೊರೆತ ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದು ಅತ್ಯುತ್ತಮ ಸಂಸ್ಕಾರ ಎಂದು ಕಟ್ಟೆ ನರಹರಿ ಕೆರೆಕೊಪ್ಪ ಹೇಳಿದರು.
ತಾಲ್ಲೂಕು ಹೊಸಬಾಳೆಯ 94ರ ವಯೋವೃದ್ಧೆ ಭಾಗೀರತಿ ವೆಂಕಟಗಿರಿ ಹೆಗಡೆ ಅವರಿಗೆ ರೈತ ಮಹಿಳಾ ದಿನಾಚರಣೆ ಅಂಗವಾಗಿ ಅವರ ಸ್ವಗೃಹದಲ್ಲಿ ಗೌರವ ಸಮರ್ಪಿಸಿ ಮಾತನಾಡಿದರು.
Also read: ಮಂಗಳೂರು | ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಪತ್ತೆ | ಜೈಲು ಅಧೀಕ್ಷಕ ಅಮಾನತು
ನಮ್ಮ ಜೀವನವು ಸಾರ್ಥ ಕತೆಯನ್ನು ಪಡೆಯಬೇಕಾದರೆ ನಾವು ಗುರು-ಹಿರಿಯರಿಂದ, ಸಾಹಿತಿ, ಕವಿಗಳು ಹಾಗೂ ಉನ್ನತ ಮಟ್ಟದ ಮೇಧಾವಿಗಳ ಅನುಕರಣೆ ಮಾಡುತ್ತೇವೆ. ನಾವು, ನಮ್ಮಿಂದ, ನಾವಾಗಿಯೇ ಪರಿ ಪೂರ್ಣತೆಯನ್ನು ಪಡೆಯಲು ಸಾಧ್ಯವಿಲ್ಲ. ನಮ್ಮ ಜೀವನದ ಸಾರ್ಥಕತೆಯನ್ನು ಕಟ್ಟಿಕೊಟ್ಟ ಗುರು-ಹಿರಿಯರಿಗೆ ನಾವು ಎಂದೆಂದಿಗೂ ಚಿರಋಣಿ ಆಗಿರಲೇ ಬೇಕು.
ಹಿರಿಯರಿಗೆ ಕೊಡುವ ವಿಧೇಯತೆಯು ನಮ್ಮನ್ನು ಸಂಸ್ಕೃತಿ, ಸಂಸ್ಕಾರದಲ್ಲಿ ಉನ್ನತಿಯ ಪರಂಪರೆಯಲ್ಲಿ ಮುನ್ನಡೆಯಲು ಪ್ರೇರಣೆಯಾಗುತ್ತದೆ. ಗುರು -ಹಿರಿಯರು ನಮಗೆ ಎಂದೆಂದೂ ಒಳ್ಳೆಯದನ್ನೇ ಬಯಸುವವರಾದ್ದರಿಂದ ಅವರ ನೀತಿ – ಬೋಧನೆಗಳ ಒಂದೊಂದು ಮಾತುಗಳು ನಮಗೆ ಮುತ್ತಿನ ಹಾರಕ್ಕೆ ಸರಿ ಸಮಾನವಾಗುತ್ತದೆ. ನಮ್ಮನ್ನು ಯಾವ ರೀತಿಯಲ್ಲಿ ಶ್ರೇಯಸ್ಸಿನ ಹಾದಿಗೆ ಕೊಂಡು ಹೋಗುತ್ತಾರೆಯೋ ಅದೇ ರೀತಿ ಅವರ ಕಷ್ಟ – ಕಾರ್ಪಣ್ಯ ಹಾಗೂ ವೃದ್ಯಾಪ್ಯದ ಸಮಯದಲ್ಲಿ ಅವರ ಸೇವೆ ಮಾಡುವುದು ದೇವರು ಮೆಚ್ಚುವ ಕೆಲಸವೇ ಆಗಿರುತ್ತದೆ. ಅದಕ್ಕಾಗಿ ಗುರು – ಹಿರಿಯರ ಮನಸ್ಸನ್ನು ನೋಯಿಸದೆ ಗೌರವ ಕೊಡುವುದರ ಮುಖೇನ ಸಕಾರಾತ್ಮಕವಾದ ಸಂಚಲನ ಕ್ರಿಯೆಗೆ ಮುಂದಾಗಬೇಕು ಎಂದರು.
ಭಾಗೀರತಿ ಅವರು ಆದರ್ಶ ಗೃಹಿಣಿ, ಸಂಸ್ಕಾರದೊಂದಿಗೆ ಸಂಸಾರವನ್ನು ನಡೆಸಿ ಇದೀಗ ೯೪ ರ ಹರೆಯದಲ್ಲಿದ್ದರೂ ನೆನಪಿನ ಶಕ್ತಿ ಕುಂದಿಲ್ಲ. ವಯೋಸಹಜ ದೈಹಿಕ ಕ್ಷೀಣತೆ ಹೊರತುಪಡಿಸಿ ಇನ್ನುಳಿದಂತೆ ತಕ್ಕಮಟ್ಟಿಗೆ ಆರೋಗ್ಯವಾಗಿದ್ದಾರೆ. ಮುಂಪೀಳಿಗೆಗೆ ದಾರಿದೀಪವಾಗಿದ್ದಾರೆ. ಇಂತವರನ್ನು ಗುರುತಿಸಿ ಗೌರವಿಸ ಬೇಕಾದುದು ಸಮಾಜದ ಕರ್ತವ್ಯ. ಈ ನಿಟ್ಟಿನಲ್ಲಿ ಕುಟುಂಬ, ಆಪ್ತೇಷ್ಟರೊಂದಿಗೆ ಗೌರವಿಸಿದೆ. ಹಿರಿಯರ ಆಶೀರ್ವಾದ ಪಡೆಯಲಾಗಿದೆ ಎಂದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post