ಕಲ್ಪ ಮೀಡಿಯಾ ಹೌಸ್
ಸೊರಬ: ತಾಲ್ಲೂಕು ಕಛೇಯಲ್ಲಿ ಕಂದಾಯ ಇಲಾಖೆ ವತಿಯಿಂದ ಕಂದಾಯ ಅದಾಲತ್ ಹಾಗೂ ಪೌತಿ / ವಾರಸ ಖಾತೆ ಬದಲಾವಣೆ ಆಂದೋಲನ ನಡೆಸಲಾಯಿತು.
ಕಾರ್ಯಕ್ರಮವನ್ನು ತಹಶೀಲ್ದಾರ್ ಗ್ರೇಡ್-2 ಮಂಜುಳಾ ಬಿ ಹೆಗಡಾಳ ಉದ್ಘಾಟಿಸಿದರು. ಹಕ್ಕು ದಾಖಲೆ ಶಿರಸ್ತೇದಾರ್ ವಿಜಯ್ ಎಸ್ ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ, ಕಸಬಾ ಹೋಬಳಿಯ ಸಾರ್ವಜನಿಕರಿಂದ 47 ಅರ್ಜಿಗಳನ್ನು ಸ್ವೀಕರಿಸಲಾಯಿತು. ರಾಜಸ್ವ ನಿರೀಕ್ಷಕರು ದೀಪಕ್ ವೈ.ಎಸ್, ಗ್ರಾಮ ಲೆಕ್ಕಾದಿಕಾರಿಗಳಾದ ಯಶವಂತ್ ರಾಜ್, ರಾಜೇಶ್ ಬಾಬು, ಸಮೀರ್, ಮಲ್ಲಿಕಾರ್ಜುನ, ಮಾರುತಿ ಕುಮಾರ್ , ವಿನೋದ್ ಪ್ರ.ದ.ಸ ಮತ್ತಿತರರು ಹಾಜರಿದ್ದರು, ಕಾರ್ಯಕ್ರಮವನ್ನು ಶ್ರೀ ಪ್ರವೀಣ್ ಟಿ.ಎಸ್ ಸಾ .ನಿ ರವರು ನಿರೂಪಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post