ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಹರೀಶಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಾಂತಿ ಭಟ್ ಇವರಿಗೆ ಗ್ರಾಪಂ ವತಿಯಿಂದ ಗಣರಾಜ್ಯೋತ್ಸವದ Republic day ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಶಾಂತಿಭಟ್ ಅವರು ಸಂತೃಪ್ತಿದಾಯಕ ಸೇವೆ ಸಲ್ಲಿಸಿದ್ದು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಹರೀಶಿ ಗ್ರಾಪಂ ವ್ಯಾಪ್ತಿಯಲ್ಲಿಯೆ 28 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಅವರು ಚಿಕ್ಕದ್ಯಾವಸ ಗ್ರಾಮದ ಸಕಿಪ್ರಾ ಶಾಲೆಯಲ್ಲಿ ನೀವೃತ್ತರಾದರು. ಅವರ ಪತಿ ನರಸಿಂಹಮೂರ್ತಿ ಕೂಡ ಶಿಕ್ಷಕರಾಗಿ ನಿವೃತ್ತಿ ಹೊಂದಿರುತ್ತಾರೆ.
Also read: ಸಾಮಾಜಿಕ ಶಾಂತಿ, ಸೌಹಾರ್ದಕ್ಕೆ ಶಾಸ್ತ್ರೀಯ ಸಂಗೀತ ಕೊಡುಗೆ ಅನನ್ಯ: ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ
ಗ್ರಾ ಪಂ ಅದ್ಯಕ್ಷೆ ಅನಸೂಯ ಗಣಪತಿ ನಾಯ್ಕ್ ಉಪಾಧ್ಯಕ್ಷ ರವಿಕುಮಾರ್, ಪಿಡಿಒ ಸಂತೋಷ್, ಪಂಚಾಯತಿ ಸಿಬ್ಬಂದಿ, ಗ್ರಾಮಸ್ಥರು, ಶಿಕ್ಷಕ ವೃಂದದವರು, ಶಾಲಾ ಸಮಿತಿಯವರು, ಗ್ರಾಪಂ ಸದಸ್ಯರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post