ಕಲ್ಪ ಮೀಡಿಯಾ ಹೌಸ್ | ಸೊರಬ |
ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸುವಂತೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಪರಿಸರ ಸಮೃದ್ಧಿ ಸಂಘಟನೆ ಅಧ್ಯಕ್ಷ ಶಿವಯೋಗಿ ಸ್ವಾಮಿ ಸುತ್ತೂರುಮಠ ಯಲಿವಾಳ ನೇತೃತ್ವದಲ್ಲಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಯುವ ಮುಖಂಡ ಶಿವಯೋಗಿ ಸ್ವಾಮಿ ಮಾತನಾಡಿ, ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ದೂರದೃಷ್ಠಿಯ ಪ್ರತೀಕವಾದ ಭದ್ರಾವತಿ ಪಟ್ಟಣದಲ್ಲಿ 1923 ರಲ್ಲಿ ವಿಎಸ್‌ಐಎಲ್ ಕಾರ್ಖಾನೆ ಸ್ಥಾಪಿತವಾಗಿದ್ದು ನಮ್ಮ ನಾಡಿನ ಹೆಮ್ಮೆ ಹಾಗೂ ಅಭಿವೃದ್ಧಿಯ ಸಂಕೇತವಾಗಿದೆ.
ದೇಶದ ಅಭಿವೃದ್ಧಿಗೆ ಕಾರ್ಖಾನೆಯು ಗಣನೀಯವಾದ ಕೊಡುಗೆ ನೀಡಿದ್ದಲ್ಲದೇ ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗದ ಆಸರೆಯಾಗಿ ಬದುಕಿಗೆ ಆಸರೆಯಾಗಿದೆ. ಪ್ರಸ್ತುತ ಕಾರ್ಖಾನೆಯು ಸಂಪೂರ್ಣ ಮುಚ್ಚುವ ಮೂಲಕ ಅವನತಿಯ ಹಂತದಲ್ಲಿದೆ. ಹೀಗಾದಲ್ಲಿ ದೇಶಕ್ಕೆ ಮತ್ತು ಅಸಂಖ್ಯಾತ ಜನರಿಗೆ ತುಂಬಲಾರದ ನಷ್ಟವುಂಟಾಗಲಿದೆ. ಆದ್ದರಿಂದ ಕೂಡಲೇ ಪರಿಸ್ಥಿತಿಯನ್ನು ಮನಗಂಡು ಕಾರ್ಖಾನೆಯನ್ನು ಪುನರಾರಂಭಿಸಿ ಪುನಶ್ಚೇತನ ಮಾಡುವ ಮೂಲಕ ದೇಶ ಹಾಗೂ ಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ವಿಭಾಗೀಯ ಸಂಚಾಲಕ ಗುರುರಾಜ್, ತಾಲೂಕು ಸಂಚಾಲಕ ಮಹೇಶ್ ಶಕುನವಳ್ಳಿ, ಹರೀಶ್ ಚಿಟ್ಟೂರು, ಬಂಗಾರಪ್ಪ ನಿಟ್ಟಕ್ಕಿ, ಮದನ್, ಸಚಿನ್, ಅರುಣ್ ಹಿರೇಇಡಗೋಡು, ಚಾಮರಾಜ ಸಿ.ಆರ್, ಏಸು ಮತ್ತಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post