ಕಲ್ಪ ಮೀಡಿಯಾ ಹೌಸ್ | ಸೊರಬ |
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಅರಳಿಸಲು ಹಾಗೂ ಸುಪ್ತ ಪ್ರತಿಭೆಯ ಅನಾವರಣಕ್ಕೆ ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ಎಂ.ಎನ್. ಮಧುಸೂದನ್ ಹೇಳಿದರು.

Also read: ಶೀಘ್ರದಲ್ಲಿಯೇ ಭಾರತವು ಎಡಪಂಥೀಯ ಉಗ್ರವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ: ಕೇಂದ್ರ ಗೃಹ ಸಚಿವ ಅಮಿತ್ ಶಾ
ವಿಜ್ಞಾನ ವಸ್ತುಪ್ರದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಮಳೆ ನೀರು ಕೊಯ್ಲು, ಕೃಷಿ ಪದ್ಧತಿ, ಬ್ಯಾಂಕಿಗ್ ವ್ಯವಸ್ಥೆ, ಹೆದ್ದಾರಿಗಳು, ಅಂತರ್ಜಲ ರಸ್ತೆ ಮಾರ್ಗ, ಸ್ಮಾರ್ಟ್ ಸಿಟಿ, ಪರಿಸರ ಮಾಲಿನ್ಯ ನಿಯಂತ್ರಣ, ಆಹಾರದ ಜೀರ್ಣಕ್ರಿಯೆ ವ್ಯವಸ್ಥೆ, ಸೂರ್ಯ-ಚಂದ್ರ ಗ್ರಹಣ, ಸೋಲಾರ್ ಬಳಕೆ, ಸ್ವಯಂ ಚಾಲಿತ ನೀರಾವರಿ ಪದ್ಧತಿ, ಬೆಳಕಿನ ಶಕ್ತಿ ಬಳಕೆ, ಮನುಷ್ಯರ ಜೀವನ ಶೈಲಿ, ರೋಬೋಟ್, ಪ್ರಾಕೃತಿಕ ಸಂಪತ್ತು ರಕ್ಷಣೆ, ಬಣ್ಣಗಳ ವರ್ಗಿಕರಣ ಹೀಗೆ ಸುಮಾರು ನೂರಾರು ಬಗೆಯ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು. ವಿಶೇಷವಾಗಿ ಚಂದ್ರಯಾನ-೩ರ ಯಶಸ್ವಿ ಉಡಾವಣೆಯ ಮಾದರಿ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿಗಳು ತಾವೇ ತಯಾರಿಸಿದ ಮಾದರಿಗಳ ಕುರಿತು ಉತ್ತಮವಾಗಿ ವಿವರಣೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ದತ್ತಾತ್ರೇಯಮೂರ್ತಿ ಪುರಾಣ ಕ್, ಆಡಳಿತಾಧಿಕಾರಿ ಸಂದೀಪ ರಾಯ್ಕರ್, ಮುಖ್ಯ ಶಿಕ್ಷಕಿ ಶಿಲ್ಪ ಸೇರಿದಂತೆ ಶಾಲೆಯ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರರಿದ್ದರು.ವರದಿ: ಮಧುರಾಮ್, ಸೊರಬ










Discussion about this post