ಕಲ್ಪ ಮೀಡಿಯಾ ಹೌಸ್ | ಸೊರಬ |
ವೈಜ್ಞಾನಿಕ ಮತ್ತು ಸುಧಾರಿತ ಕೃಷಿ ಪದ್ಧತಿ ಇಂದಿನ ಅಗತ್ಯ, ಮಣ್ಣಿನ ಪರೀಕ್ಷೆ ಮಾಡಿಸಿ ಅದರ ಸತ್ವ ಅರಿತು ಹದ ಪ್ರಮಾಣದ ಪೋಷಕಾಂಶಯುಕ್ತ ಗೊಬ್ಬರ ನೀಡಿದಾಗ ಮಾತ್ರ ನಿರೀಕ್ಷಿತ ಫಸಲು ಪಡೆಯಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಜಿ ಹೇಳಿದರು.
ಸೊರಬದ ಜೀವಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೊರಬ ತಾಲ್ಲೂಕು ಚುಂಚಾದ್ರಿ ಮಹಿಳಾ ವೇದಿಕೆ, ಶಿವಮೊಗ್ಗ ತಾಲೂಕು ಒಕ್ಕಲಿಗರ ಸಂಘ, ಸೊರಬ ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕೃಷಿ ತರಬೇತಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಯೋಜನೆಗಳು ಮತ್ತು ಸವಲತ್ತುಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಉಳವಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ. ಪ್ರಜ್ವಲ್ ಕುಮಾರ್ ರೈತ ಮಹಿಳೆಯರು ಯೋಜಿತ ಕೃಷಿಗೆ ಒತ್ತು ನೀಡುವ ಮೂಲಕ ಸ್ವಾವಲಂಬಿಗಳಾಗಬೇಕು ಎಂದರು.
ನೀರಿನ ಅಪವ್ಯಯವಾಗದಂತೆ ಬಳಸಿಕೊಂಡು ಗೃಹಬಳಕೆಗೆ ಅಗತ್ಯವಿರುವ ಹೂವು ತರಕಾರಿ ಬೆಳೆಯಬೇಕು ಹೈನುಗಾರಿಕೆ ಮತ್ತು ಅಣಬೆ ಬೇಸಾಯ ಇಂದು ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸುತ್ತಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷ್ಯೆ ಭಾರತಿ ರಾಮಕೃಷ್ಣ ಮಾತನಾಡಿ ಸಮುದಾಯದ ಮಹಿಳೆಯರು ಸಂಘಟಿತರಾಗಿ ಸುಧಾರಣೆ ಹೊಂದಬೇಕು ಎಂದರು. ಸೊರಬ ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷರಾದ ರಾಧಾ ಉಮೇಶ್ ಭದ್ರಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಸಂಘಟಿತ ಮಹಿಳೆಯರನ್ನು ಸಂಘಟಿಸುತ್ತಿರುವ ಕಾಯಕ ತೃಪ್ತಿ ನೀಡಿದೆ ಎಂದರು. ಶಿವಮೊಗ್ಗದ ನ್ಯಾಯವಾದಿ ಸಾಧ್ವಿ ಸಿ. ಕಾಂತ್ ಮಾತನಾಡಿ ಮಹಿಳೆಯರ ಸಾಧನೆ ಮತ್ತು ಸಂಘಟನೆಗೆ ಪುರುಷರ ಪಾತ್ರ ಪ್ರಧಾನವಾದದ್ದು ಎಂದರು.
ಸೊರಬ ಪಿಯು ಕಾಲೇಜಿನ ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದರು. ಸೊರಬದ ಸೈಂಟ್ ಸೆಬಾಸ್ಟಿಯನ್ ಚರ್ಚ್ ನ ಧರ್ಮಗುರು ಫಾ|| ರಾಬರ್ಟ್ ಡಿಮೆಲ್ಲೋ ಅವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಸಾಗರ ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷ್ಯೆ ಭಾಗೀರಥಿ ಕೆರೆಕೊಪ್ಪ ಶಿವಮೊಗ್ಗ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ ಎಸ್ ಚಂದ್ರಕಾಂತ್ ಸೊರಬ ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮಾಕಾಂತ್ ಗೌಡ ನೆಲ್ಲೂರು, ಕೃಷ್ಣಪ್ಪ ಕಾರೆಹೊಂಡ, ಉಪನ್ಯಾಸಕ ರವಿ ವೈ, ಉತ್ತರ ಕನ್ನಡ ಜಿಲ್ಲಾ ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷ್ಯೆ ಮಹಾಲಕ್ಷ್ಮಿಗೌಡ ಮಳಲಿ, ಸವಿತಾ ಕೃಷ್ಣ ಕಾರೆಹೊಂಡ, ಅಶ್ವಿನಿ ಹೊಸಕೊಪ್ಪ, ಸುಲೋಚನಾ ನೆಲ್ಲೂರು, ಮಮತಾ ನಿಸರಾಣಿ, ಗೋದಾವರಿ ಹೊಸಕೊಪ್ಪ, ಸಾವಿತ್ರಮ್ಮ, ಗೋದಾವರಿ ಯಕ್ಷಿ, ಸುಮಲತಾ, ಪುಷ್ಪಾ, ಸರಿತಾ ಸ್ವಾಮಿ, ಅನುಪಮಾ, ಚೇತನ, ಕವನಾ ಉಪಸ್ಥಿತರಿದ್ದರು, ಸ್ವಾವಲಂಬಿ ಕೃಷಿಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ಮಹಿಳೆಯರಿಗೆ ಒಳಾಂಗಣ ಆಟದ ಸ್ಪರ್ಧೆ ಮತ್ತು ಜನಪದ ಹಾಡಿನ ಸ್ಪರ್ಧೆ ಏರ್ಪಡಿಸಲಾಗಿತ್ತು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post