ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಜೀವವೈವಿಧ್ಯ ನಿರ್ವಹಣ ಸಮಿತಿ ಜನರ ಬದುಕಿಗೆ ಮಾರಕವಾಗಿರುವ ಗಣಿಗಾರಿಕೆಯಂತಹ ಅಭಿವೃದ್ಧಿ ಹೆಸರಿನ ಯೋಜನೆಯನ್ನು ಪ್ರಬಲವಾಗಿ ಖಂಡಿಸಿದೆ ಎಂದು ತಾಲ್ಲೂಕು ಜೀವವೈವಿಧ್ಯ ನಿರ್ವಹಣ ಸಮಿತಿ ಸಂಪರ್ಕ ಸಭೆಯಲ್ಲಿ ವ್ಯಕ್ತಪಡಿಸಿತು.
ರಾಜ್ಯ ಜೀವವೈವಿಧ್ಯ ಮಂಡಳಿಯ ಅಧಿಕಾರಿಗಳೊಂದಿಗೆ ಬಿಳಾಗಿ, ಹಳೇಸೊರಬ ಕಾನು ಪ್ರದೇಶಗಳಿಗೆ ಭೇಟಿ ನೀಡಿ ತಾಲ್ಲೂಕು ಜೀವವೈವಿಧ್ಯ ಸಮಿತಿಯ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದ ಸಮಿತಿ, ಜೀವವೈವಿಧ್ಯ ನಿರ್ವಹಣ ಸಮಿತಿ ಪ್ರತಿ ಗ್ರಾಮ ಪಂಚಾಯತಿಯಲ್ಲಿದ್ದು ಜೀವವೈವಿಧ್ಯತೆಯ ವ್ಯಾಖ್ಯಾನವನ್ನು ಅರಿತು ಯೋಜನಾಂಗಗಳನ್ನು ರಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಚಂದ್ರಗುತ್ತಿ ಬಸ್ತಿಕೊಪ್ಪ ಅವಸಾನದ ಅಂಚಿನಲ್ಲಿದ್ದು ಗ್ರಾಮಾಭಿವೃದ್ಧಿ ಶಿಬಿರದ ಮೂಲಕ ಪುನಶ್ಚೇತನಕ್ಕೆ ಮುಂದಾಗಿದೆ ಎಂದರು.
ಸಾವಿರಾರು ವರ್ಷದ ವೃಕ್ಷಸಮೂಹವಿರುವ ಹಳೇಸೊರಬ ದೇವರಕಾಡಿಗೆ ಜೀವವೈವಿಧ್ಯ ತಾಣ ಎಂದು ಗುರುತಿಸಲ್ಪಟ್ಟಿದ್ದು, ಬರಿಗೆ ಕಾನಿಗೆ ಜೇನುಕಾನು ಎಂದು ಗುರುತಿಸಿ ರಕ್ಷಣೆಗೆ ಮುಂದಾಗಿರುವುದು, ಬಿಳಾಗಿ ಕೆರೆಯನ್ನು ರಕ್ಷಿತ ಜೀವವೈವಿಧ್ಯ ಕೆರೆಯನ್ನಾಗಿ ಗುರುತಿಸಿರುವುದು, ನೂರಾರು ವರ್ಷದ ಅಪರೂಪದ ವೃಕ್ಷಗಳನ್ನ ಗುರುತಿಸಿ ಜೈವಿಕ ವೃಕ್ಷದ ಪಟ್ಟ ನೀಡಿದ್ದು ಇಂತಹ ಇನ್ನೂ ಅನೇಕ ಪರಿಸರ ರಕ್ಷಣೆಯ ಚಟುವಟಿಕೆಗಳಿಗೆ ರಾಜ್ಯ ಜೀವವೈವಿಧ್ಯ ಮಂಡಳಿ ಅನುಮೋದಿಸಬೇಕು ಎಂದು ಕೋರಿತು.
ಮಾದರಿ ಜೀವವೈವಿಧ್ಯ ನಿರ್ವಹಣಾ ಸಮಿತಿಯಾಗಿರುವ ಸೊರಬ ತಾಲ್ಲೂಕಿನಲ್ಲಿ ಗುರುತರ ಚಟುವಟಿಕೆ ನಡೆಸಿರುವುದಕ್ಕೆ ರಾಜ್ಯ ಜೀವವೈವಿಧ್ಯ ಮಂಡಳಿ ಅಧಿಕಾರಿ ಪವಿತ್ರ ಮೆಚ್ಚುಗೆ ಸೂಚಿಸಿದರು. ಅನುದಾನಗಳ ಸದ್ವಿನಿಯೋಗವಾಗಲಿ ಎಂದರು.
ರಾಜ್ಯ ಜೀವವೈವಿಧ್ಯ ಮಂಡಳಿಯ ಡಾ.ಪ್ರೀತಮ್, ನಿಖಿಲ್ ಬಿಎಂಸಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಬಿಎಂಸಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಅರಣ್ಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ತಾಪಂ ಸಿಬ್ಬಂದಿ ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post