ಕಲ್ಪ ಮೀಡಿಯಾ ಹೌಸ್ | ಸೊರಬ |
ಮಕ್ಕಳು ಹೂವಿನಂತಿದ್ದು ಅರಳಿ ಬೆಳೆಯಲು ಸರಿಯಾದ ಸಮಯಕ್ಕೆ ಪೋಷಕರ ಪೋಷಣೆ ಅಗತ್ಯವಿರುತ್ತದೆ ಎಂದು ನಿವೃತ್ತ ಶಿಕ್ಷಕಿ ಸಾವಿತ್ರಮ್ಮ ಹೇಳಿದರು.
ಪಟ್ಟಣದ ಸಮರ್ಪಣ ಸಂಸ್ಥೆಯ ಸ್ಮಾರ್ಟ್ ಕಿಡ್ಜ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಡ್ಯೂಯೇಟ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕತೆಗಳ ಮೂಲಕ ಮಕ್ಕಳು ಬಹುಬೇಗ ವಿಷಯಗಳನ್ನು ಗ್ರಹಿಸುತ್ತವೆ. ನೀತಿಕತೆಗಳು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿರುವುದರಿಂದ ಅವು ಅಜ್ಜ ಅಜ್ಜಿಯ ಜೊತೆ ಬೆಳೆದು ಕತೆಗಳನ್ನು ಅವರ ಮೂಲಕ ಅರಿತುಕೊಂಡಾಗ ಓದಿನ ಕುರಿತ ಆಸಕ್ತಿ ಉತ್ತಮವಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಬೆಳವಣಿಗೆಯ ಹಂತದಲ್ಲಿ ಕೆಲವು ತ್ಯಾಗಕ್ಕೆ ಸಜ್ಜಾಗಬೇಕು. ಮುಖ್ಯವಾಗಿ ಬೆಳವಣಿಗೆಗೆ ವ್ಯತಿರಿಕ್ತವಾಗುವ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ದೂರವಿದ್ದು ಮಕ್ಕಳ ಆಸಕ್ತಿ ಅತ್ತ ಸಾಗದಂತೆ ನೋಡಿಕೊಳ್ಳಬೇಕು ಎಂದರು.
Also read: ಸೊರಬ | ಜನಪದ ಸಂಸ್ಕೃತಿ ಇನ್ನೂ ಹಳ್ಳಿಗಳಲ್ಲಿ ಜೀವಂತ | ಬಿ. ಲೋಕೇಶ್
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಆರೋಗ್ಯ ಇಲಾಖೆಯ ಅಧಿಕಾರಿ ಶಿಲ್ಪ ವಿನಾಯಕ ಕಾನಡೆ ಮಾತನಾಡಿ, ಮಕ್ಕಳ ಮನೋ ಸ್ಥೈರ್ಯ, ದೈಹಿಕ, ಬೌದ್ಧಿಕ ಬೆಳವಣಿಗೆಗೆ ಸ್ಮಾರ್ಟ್ ಕಿಡ್ಜ್ ಪ್ರೋತ್ಸಾಹಿಸುತ್ತಿದ್ದು ಧನಾತ್ಮಕ ಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಸಂಸ್ಥೆಯ ಮಮತಾ ರಾಜೇಶ್ ಪ್ರಾಸ್ತಾವಿಕ ಮಾತನಾಡಿದರು. ಅತಿಥಿ ಶ್ರೀಪಾದ ಬಿಚ್ಚುಗತ್ತಿ ಮಕ್ಕಳ ಮನೋವಿಜ್ಞಾನದ ವಿಷಯ ಪ್ರಸ್ತಾಪಿಸಿದರು.
ಯುಕೆಜಿ ಪೂರೈಸಿದ ಮಕ್ಕಳಿಗೆ ಗ್ರಾಡ್ಯೂಯೇಶನ್ ಪ್ರಶಸ್ತಿ ಪತ್ರ, ಪೋಷಾಕು ನೀಡಿ ಸಂಭ್ರಮಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಕೆ.ಪಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಿಬ್ಬಂದಿ ಪೂರ್ಣಿಮಾ, ಚಂದನಾ, ಅಂಕಿತ, ಕವಿತಾ, ಪೋಷಕರು, ಮಕ್ಕಳು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post