ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಉಳವಿ ಗ್ರಾಮದ ರೈತಬಂಧು ಆಲೆಮನೆಯಲ್ಲಿ ಸಾಂಪ್ರದಾಯಿಕ “ಆಲೆಮನೆ” ಹಬ್ಬವನ್ನು ಆಯೋಜಿಸಲಾಗಿತ್ತು. ಹವ್ಯಾಸಿ ಪತ್ರಕರ್ತರು ಹಾಗೂ ಕವಿ ಬಿ.ಎನ್.ಸಿ. ರಾವ್ ಬರಗಿ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳು ಮುಂದಿನ ತಲೆಮಾರಿಗೆ ಪರಿಚಿತವಾಗಬೇಕು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಈ ಪ್ರಯತ್ನವು ಗ್ರಾಮೀಣ ಭಾಗದಲ್ಲಿ ಕನ್ನಡ ಕಟ್ಟಲು ಮತ್ತು ಬೆಳೆಸಲು ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಗ್ರಾಮೀಣ ಭಾಗದ ಸಂಪ್ರದಾಯ ಕೃಷಿ ಜೀವನ ಶೈಲಿಯನ್ನು ಉಳಿಸುವ ಈ ಪ್ರಯತ್ನ ಮುಂದುವರಿಸುತ್ತೇವೆ.ರೈತರು ಬೆಳೆದ ಕಬ್ಬಿನಿಂದ ತಯಾರಿಸಿದ ಹಾಲು, ಬೆಲ್ಲ ಸೇವಿಸುವ ಮಜಾ ಇನ್ನೆಲ್ಲಿಯೂ ಸಿಗದು.ಮುಂದಿನ ವರ್ಷ ಈ ಆಲೆಮನೆ ಹಬ್ಬವನ್ನು ಇನ್ನೂ ಅದ್ದೂರಿಯಾಗಿ ನಡೆಸಲು ಸಿದ್ಧತೆಮಾಡಿಕೊಳ್ಳುತ್ತೇವೆ.
ಮಂಜಪ್ಪ ಉಳವಿ, ಮಾಲೀಕರು, ರೈತ ಬಂದು ಆಲೆಮನೆ
ಕವಯಿತ್ರಿ ಜೋಷಿ ಅವರು ತಮ್ಮ ಕವಿತೆಯ ಮೂಲಕ, ಹಳ್ಳಿಗಳಲ್ಲಿ ನಡೆಯುತ್ತಿದ್ದ ಆಲೆಮನೆ ಸಂಪ್ರದಾಯದ ಸೊಗಸು, ಗಾಣಕ್ಕೆ ಎತ್ತು ಕಟ್ಟುವ ದೃಶ್ಯ, ಹಾಲು-ಬೆಲ್ಲದ ಸವಿಯನ್ನು ಕೇಳುಗರ ಕಣ್ಮುಂದೆ ಕಟ್ಟಿದರು. ಆಲೆಮನೆ ಸಂಪ್ರದಾಯ ನಮ್ಮ ಗ್ರಾಮೀಣ ಬದುಕಿನ ಅಂಗವಾಗಿದ್ದು, ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಮುಖ ಅಂಗವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಷಣ್ಮುಖಾಚಾರ್ ಅವರು ಮಾತನಾಡಿ, ಮೂಲ ಸಂಸ್ಕೃತಿ ಮತ್ತು ಹಬ್ಬಗಳು ಮರೆಯಾಗದಂತೆ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಹಬ್ಬವನ್ನು ಆಯೋಜಿಸಿದ್ದೇವೆ. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಉತ್ಸಾಹ ನೀಡುತ್ತವೆ ಎಂದರು.
Also read: Healthcare Global Enterprises Reinforces Its Commitment to Comprehensive Cancer Care Across India
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಲಘು ಉಪಹಾರ ಮತ್ತು ಅನಿಯಮಿತ ತಿನ್ನಲು ಕಬ್ಬು, ಕಬ್ಬಿನ ಹಾಲು ಬೆಲ್ಲ ಸವಿಯುವ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 250 ಕ್ಕೂ ಹೆಚ್ಚು ಜನ ಯುವಕ ಯುವತಿಯರು ಮಕ್ಕಳು ಮತ್ತು ಹಿರಿಯರು ಪಾಲ್ಗೊಂಡರು.
ಈ ಸಂಧರ್ಭದಲ್ಲಿ ಶಕುಂತಲಾ ಮಂಜಪ್ಪ, ರಾಮಣ್ಣ, ಸುಧಾ, ಸುದರ್ಶನ್, ಶಂಕರ್ ಡಿ ಎಸ್ ಶೇಟ್, ರಾಘವೇಂದ್ರ ಭಾಪಟ್, ಸತೀಶ್ ಗುರೂಜಿ, ಆಗಷ್ಟಿನ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ರೇವಣಪ್ಪ ಬಿದರಗೇರಿ, ಲಿಂಗರಾಜ ಕೆ ಗೌಡ, ಸುಬ್ರಹ್ಮಣ್ಯ ಎಸ್ ಗುಡಿಗಾರ್, ಶ್ರೀ ರಾಜೇಂದ್ರ ಜೈನ್, ರಮೇಶ್ ಎನ್ ಮಂಚಿ, ಮಾಲತೇಶ್ ಶಿಕ್ಷಕರು, ಮಹೇಶ್ ಖಾರ್ವಿ, ವಿಜಯ್ ಕುಮಾರ್ ಬಾಂಬೋರೆ ,ಮೋಹನ್ ಸುರಭಿ, ಸಹನ ರಾಜೇಂದ್ರ ಕುಮಾರ್ ಜೈನ್, ವೀಣಾ ಶ್ರೀಧರ್, ರೂಪಾ ಮಧುಕೇಶ್ವರ, ಅನುಕೃತ ರಾಘವೇಂದ್ರ, ಸುಮಾ ಪ್ರಶಾಂತ್, ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post