ಕಲ್ಪ ಮೀಡಿಯಾ ಹೌಸ್ | ಸೊರಬ |
ಭಾರೀ ಮಳೆಯ #HeavyRain ಪರಿಣಾಮ ಇಲ್ಲಿನ ತವನಂದಿ ಸಮೀಪದ ಆನವಟ್ಟಿ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡು, ವಾಹನ ಸವಾರರು ಪರದಾಡುವಂತಾಯಿತು.
ತವನಂದಿ ಸಮೀಪ ಆನವಟ್ಟಿ #Anavatti ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮವಾಗಿ ಸಂಚಾರ ವ್ಯವಸ್ಥೆ ಕೆಲಕಾಲ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ.
Also read: ಕೊಪ್ಪಳ | ರೈಲ್ವೆ ಹಳಿ ಮೇಲೆ ಎಣ್ಣೆ ಪಾರ್ಟಿ, ಅಲ್ಲೇ ಮಲಗಿದ ಮೂವರು| ಆನಂತರ ನಡೆದಿದ್ದು…
ಈ ಘಟನೆ ಮುಂಜಾನೆ 10 ಗಂಟೆಗೆ ಸಂಭವಿಸಿದ್ದು, ಇದರಿಂದಾಗಿ ಕಿಲೋಮೀಟರ್ ದೂರದವರೆಗೆ ವಾಹನ ದಟ್ಟಣೆ ಉಂಟಾಗಿದೆ.
ಫಾರೆಸ್ಟ್ ಇಲಾಖೆ ಮತ್ತು ಸ್ಥಳೀಯರ ಸಹಾಯದಿಂದ ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ಯಶಸ್ವಿ ಆಗಿದೆ. ವಾಹನ ಸವಾರರು ಎಚ್ಚರಿಕೆಯಿಂದ ಈ ರೀತಿ ಮಾರ್ಗಗಳಲ್ಲಿ ಓಡಾಡುವಂತೆ ಇಲಾಖೆಯವರು ಸೂಚಿಸಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post